ಪುತ್ತೂರು: ಜೇಸಿಐಯಿಂದ ಈ ವರ್ಷ ನಮಸ್ತೆ ಜೇಸಿಐ ಸಪ್ತಾಹ-2022 ಕಾರ್ಯಕ್ರಮ ಸೆ.9 ರಿಂದ 15 ರವರೆಗೆ ನಡೆಯಲಿದ್ದು, 7 ದಿನವೂ ವಿವಿಧ ಮಾಹಿತಿ ಮತ್ತು ಸಮರ್ಪಣಾ ಸೇವಾ ಕಾರ್ಯಕ್ರಮಗಳು ನಡೆಯಲಿದೆ.
ಸೆ.11 ರಂದು ಬೊಳುವಾರು ಹೋಟೆಲ್ ಉದಯಗಿರಿಯಿಂದ ದಿ ಪುತ್ತೂರು ಕ್ಲಬ್ ತನಕ ಸೈಕಲ್ ಜಾಥಾ ನಡೆಯಲಿದೆ.
ಬೆಳಿಗ್ಗೆ 8.30ಕ್ಕೆ ಸೈಕಲ್ ಜಾಥಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಜಾಥಾದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಆಯೋಜರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.