ವಿಟ್ಲ: ವ್ಯಕ್ತಿಯೋರ್ವರು ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸಾಲೆತ್ತೂರು-ನೂಜಿಬೈಲು ಎಂಬಲ್ಲಿ ನಡೆದಿದೆ.
ಮೃತರನ್ನು ಕೊಳ್ನಾಡು ಗ್ರಾಮದ ಸಾಲೆತ್ತೂರು-ನೂಜಿಬೈಲು ನಿವಾಸಿ ಸುನಿಲ್ ರೈ(34) ಎಂದು ಗುರುತಿಸಲಾಗಿದೆ.
ಸುನಿಲ್ ರವರು ಕುಡಿತದ ಚಟ ಹೊಂದಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಸುನೀಲ್ ರವರ ಪತ್ನಿ ಸುಲೋಚನಾ ರವರು ಪಂಚಾಯತ್ ಸದಸ್ಯೆಯಾಗಿದ್ದಾರೆ..