ಕಾರ್ಕಳ : ಸಾವಯವ ಕೃಷಿಕ ತೆಳ್ಳಾರು ನೀಲೆಬೆಟ್ಟು ಭಾಸ್ಕರ ಹೆಗ್ಡೆ (63) ಅವರು ತಮ್ಮ ನಿವಾಸದಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆ ಈ ಕೃತ್ಯ ಎಸಗಿದ್ದಾರೆ. ಪತ್ನಿ ಚಾ ಮಾಡಲೆಂದು ಅಡುಗೆ ಕೊಠಡಿ ಪ್ರವೇಶಿದ್ದ ವೇಳೆ ಗುಂಡಿನ ಸದ್ದು ಕೇಳಿಬಂದಿದ್ದು, ಹೊರಗೆ ಬಂದು ನೋಡುವಾಗ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬಹಿರಂಗಗೊಂಡಿದೆ.
ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಸಾವಯವ ಕೃಷಿಕಯಲ್ಲಿ ತೊಡಗಿಸಿಕೊಂಡಿದ್ದರು.
ತನ್ನ ಜಮೀನಿನಲ್ಲಿ ಸಾವಯವ ತರಕಾರಿ ಬೆಳೆಯುತ್ತಿದ್ದರು. ಆತ್ಮಹತ್ಯೆಗೆ ಆರ್ಥಿಕ ಅಡಚಣೆ ಕಾರಣ ಎಂದು ಹೇಳಲಾಗುತ್ತಿದ್ದು, ಖಚಿತ ಮಾಹಿತಿ ತನಿಖೆಯಿಂದಷ್ಟೆ ಬಹಿರಂಗವಾಗಬೇಕಿದೆ. ಪೊಲೀಸರು ಘಟನೆ ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.