ಪುತ್ತೂರು: ಅಸೌಖ್ಯದಿಂದಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಮೂಲತಃ ಮಾಡವು ಅಂಗಡಿಹಿತ್ಲು ನಿವಾಸಿ ಪ್ರಸ್ತುತ ಬೆಳ್ಳಾರೆಯಲ್ಲಿ ವಾಸವಿರುವ ಟೈಲರ್ ಗಂಗಾಧರ ಗೌಡ ಎಂಬವರ ಪುತ್ರ ಕಾರ್ತಿಕ್ (24) ಮೃತ ಯುವಕ.
ಕಾರ್ತಿಕ್ ಡಿಪ್ಲೋಮ ವಿದ್ಯಾಭ್ಯಾಸ ಮಾಡಿ ಉದ್ಯೋಗದಲ್ಲಿದ್ದರು. ಆದರೇ ಕೆಲ ಸಮಯಗಳಿಂದ ಅಸೌಖ್ಯದಿಂದಿದ್ದ ಅವರು ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.