ಪುತ್ತೂರು: ತಾಲೂಕಿನ ತಿಂಗಳಾಡಿಯಲ್ಲಿ ಹಿಂದೂ ಯುವತಿಯ ಜೊತೆ ಅನ್ಯಕೋಮಿನ ಯುವಕ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಸರ್ವೆ ಸೊರಕೆ ನಿವಾಸಿ ಆದಂ ಎಂಬವರ ಪುತ್ರ ಬದ್ರುದ್ದೀನ್ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿ.

ಸೆ.14 ರಂದು ಸಂಜೆ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿರುವ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ಟೀಟ್ ಸ್ಟಾಲ್ ಎಂಬ ಅಂಗಡಿಯಲ್ಲಿ ಸ್ವೀಟ್ ಖರೀದಿಸಿ ಅಂಗಡಿಯ ಮಾಲೀಕರಿಗೆ ಹಣವನ್ನು ನೀಡುತ್ತಿರುವಾಗ ಸದ್ರಿ ಅಂಗಡಿಯೊಳಗೆ ಬಂದ ಆರೋಪಿಯು ಏಕಾಏಕಿ ಯುವತಿ ಸೊಂಟದ ಹಿಂಬದಿಗೆ ಕೈ ಹಾಕಿದ್ದು, ಆ ವೇಳೆ ಯುವತಿ ಬೊಬ್ಬೆ ಹಾಕಿ ಬದ್ರುದ್ದೀನ್ ನನ್ನು ದೂರ ತಳ್ಳಲು ಯತ್ನಿಸಿದಾಗ ಆತನು ಅಂಗಡಿಯಿಂದ ಹೊರಗೆ ಓಡಿ ಹೋಗಿರುತ್ತಾನೆ. ಬಳಿಕ ಯುವತಿಯು ಸದ್ರಿ ಅಂಗಡಿಯ ಮಾಲಿಕರಲ್ಲಿ ವಿಚಾರಿಸಲಾಗಿ ಯುವಕನು ಸೊರಕೆ ಬಳಿಯ ಆದಂ ಎಂಬವರ ಮಗನಾದ ಬದ್ರುದ್ದೀನ್ ಎಂಬುದಾಗಿ ತಿಳಿದಿರುತ್ತದೆ. ಆದುದರಿಂದ ಸಾರ್ವಜನಿಕ ಸ್ಥಳದಲ್ಲಿ ಸೊಂಟದ ಹಿಂಬದಿಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಬದ್ರುದ್ದೀನ್ ಎಂಬವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಯುವತಿಯು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾಯಲ್ಲಿ ಅಕ್ರ : 91/2022 ಕಲo: 354 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಸೆ.15ರ ಬೆಳಿಗ್ಗೆ 8.00 ಗಂಟೆಯ ಒಳಗೆ ಪೊಲೀಸ್ ಇಲಾಖೆ ಬಂಧಿಸದೇ ಇದ್ದಲ್ಲಿ ತಿಂಗಳಾಡಿ ಪೇಟೆ ಬಂದ್ ಮಾಡುವುದರ ಜೊತೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಹಿಂದೂ ಸಂಘಟನೆಯ ಪ್ರಮುಖರು ತಿಳಿಸಿದ್ದರು. ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
