ಪುತ್ತೂರು: ಶಾಸಕ ಸಂಜೀವ ಮಠಂದೂರು ರವರ ಅನುದಾನ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸುಮಾರು 80 ಲಕ್ಷ ವೆಚ್ಚದಲ್ಲಿ ಮೈರ-ಎರುಂಬು ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯು ಕೊನೆಯ ಹಂತದಲ್ಲಿ ನಡೆಯುತ್ತಿದೆ.
ಕೊನೆಯ ಹಂತದಲ್ಲಿರುವ ಮೈರ-ಎರುಂಬು ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಕೇಪು ಶಕ್ತಿ ಕೇಂದ್ರದ ಸಂಚಾಲಕರಾದ ರಾಧಾಕೃಷ್ಣ ಶೆಟ್ಟಿ, ತಾರಾನಾಥ ಆಳ್ವ, ಪಂಚಾಯತ್ ಸದಸ್ಯರಾದ ಜಗಜೀವನ್ ರಾಂ ಶೆಟ್ಟಿ ಮತ್ತು ಪುರುಷೋತ್ತಮ ಗೌಡ ವೀಕ್ಷಿಸಿದರು. ಈ ಕಾಮಗಾರಿಯನ್ನು ಬೆಳ್ತಂಗಡಿಯ ಸ್ವಾಮಿ ಪ್ರಸಾದ್ ಅಸೋಸಿಯೇಟ್ಸ್ ನಿರ್ವಹಿಸುತ್ತಿದ್ದಾರೆ.