ಪುತ್ತೂರು: ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಯವರ ಹುಟ್ಟುಹಬ್ಬದ ಪ್ರಯುಕ್ತ ಪೆರ್ನೆಯಲ್ಲಿ ನಡೆದ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬೆಳ್ಳಾರೆ ಸಿಎ ಬ್ಯಾಂಕ್ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ರವರ 50 ಸಾವಿರ ರೂ.ನಗದು ನಾಪತ್ತೆಯಾದ ಘಟನೆ ನಡೆದಿದೆ.
ಅಡಿಕೆ ಮಾರಾಟ ಮಾಡಿದ ಅಂಗಡಿಯವರು ನೀಡಿದ್ದ ನಗದು 50 ಸಾವಿರ ರೂ.ಗಳನ್ನು ಪ್ಯಾಂಟಿನ ಎಡಬದಿಯ ಕಿಸೆಯೊಳಗೆ ಇಟ್ಟುಕೊಂಡಿದ್ದೆ. ರಮಾನಾಥ ರೈ ಯವರಿಗೆ ಹಾರಾರ್ಪಣೆ ಸಂದರ್ಭ ಒಮ್ಮೆಲೇ ರಶ್ ಉಂಟಾಗಿತ್ತು ಈ ವೇಳೆ ಕಿಸೆಯಲ್ಲಿದ್ದ 50 ಸಾವಿರ ರೂ.ಗಳ ಕಟ್ಟು ನಾಪತ್ತೆಯಾಗಿದೆ.
ಹಣವನ್ನು ಯಾರಾದರೂ ಕದ್ದಿರುವ ಸಾಧ್ಯತೆ ಇದೆ. ಘಟನೆ ಬಳಿಕ ಸಮಾರಂಭ ನಡೆದ ಸಭಾಂಗಣದಲ್ಲಿ ಸಿಸಿ ಕ್ಯಾಮರಾ ಚೆಕ್ ಮಾಡೋಣ ಎಂದು ಹೋದೆವು., ಆದರೆ ಅಲ್ಲಿ ಸಿಸಿ ಕ್ಯಾಮರಾ ಇರಲಿಲ್ಲ ಎಂದು ಅನಿಲ್ ರೈ ಯವರು ಹೇಳಿದ್ದಾರೆ.
