ಪುತ್ತೂರು: ತಾಲೂಕಿನ ತಿಂಗಳಾಡಿಯಲ್ಲಿ ಹಿಂದೂ ಯುವತಿಯ ಜೊತೆ ಅನ್ಯಕೋಮಿನ ಯುವಕ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಅನ್ಯಕೋಮಿನ ಯುವಕನಿಂದ ಕಿರುಕುಳಕ್ಕೆ ಒಳಗಾದ ಯುವತಿಯ ಮನೆಗೆ ಶ್ರೀಧಾಮ ಮಾಣಿಲದ ಶ್ರೀ ಮೋಹನ್ ದಾಸ ಪರಮಹಂಸ ಸ್ವಾಮೀಜಿ ಭೇಟಿ ನೀಡಿದರು.

ನಾವು ಪ್ರತಿಸಲ ಎಲ್ಲಾ ಭಾಗಗಳಲ್ಲೂ ಹೇಳ್ತೆವೆ ನಮ್ಮ ಹೆಣ್ಣು ಮಕ್ಕಳು ಶಾಲಾ-ಕಾಲೇಜಿಗೆ ಹೋಗುವಾಗ ಜಾಗರೂಕರಾಗಿರಬೇಕು. ಬೇರೆ ಬೇರೆ ರೀತಿಯ ದುಷ್ಕೃತ್ಯ ನಡೆಯುವಂತಹ ಪರಿಸ್ಥಿತಿ ಸಮಾಜದಲ್ಲಿ ಆಗುತ್ತಿದೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಇಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಗಗಳಲ್ಲಿ ನಡೆಯಬಹುದು ಎಲ್ಲರು ಎಚ್ಚೆತ್ತುಕೊಳ್ಳಬೇಕು. ಯಾವುದೇ ವ್ಯವಹಾರಕ್ಕೆ ಅನ್ಯಮತೀಯರ ಅಂಗಡಿ ಬಾಗಿಲಿಗೆ ಹೆಣ್ಣು ಮಕ್ಕಳನ್ನು ಕಳಿಸ್ಬೇಡಿ.
ಇದಕ್ಕಿಂತ ಮೊದಲು ಕನ್ಯಾನ ಭಾಗದಲ್ಲಿ ಈ ರೀತಿಯ ಕೃತ್ಯಗಳು ನಡೆದಿದ್ದವು. ಇದೀಗ ತಿಂಗಳಾಡಿಯಲ್ಲಿಯೂ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿವಸದಲ್ಲಿ ಈ ರೀತಿಯ ಕೃತ್ಯವಾಗದಂತೆ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಆರೋಪಿಗೆ ಸರಿಯಾದ ಶಿಕ್ಷೆಯಾಗಬೇಕು. ಮುಂದೆ ಇಂತಹ ಅಪರಾಧ ಕೃತ್ಯ ಯಾವುದೇ ಭಾಗದಲ್ಲಿ ಆಗದಂತೆ ಅಪರಾಧಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು. ಅದೇ ರೀತಿ ಹಿಂದೂ ಜಾಗರೂಕರಾಗಿರಬೇಕು ಎಂದು ಸ್ವಾಮೀಜಿಗಳು ಹೇಳಿದರು.

ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವು ಹಿಂದೂ ಮುಖಂಡರು ಉಪಸ್ಥಿತರಿದ್ದರು.
