ಪುತ್ತೂರು: ಮೈಸೂರು ಮೂಲದ ಕೆಲವರು ಟ್ರಸ್ಟ್ ಗೆ ಹಣ ಕಲೆಕ್ಷನ್ ಗೆಂದು ಈಶ್ವರಮಂಗಲ ಪರಿಸರದಲ್ಲಿ ಓಡಾಡುತ್ತಿದ್ದು, ಈ ಬಗ್ಗೆ ಅನುಮಾನ ಮೂಡಿದ ಸಾರ್ವಜನಿಕರು ಅವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮೈಸೂರು ಮೂಲದವರೆಂದು ಹೇಳಾಗುತ್ತಿರುವ ಹಲವರು ನೆಟ್ಟಣಿಗೆ ಮುಡ್ನೂರು, ಈಶ್ವರಮಂಗಲ ಪರಿಸರದಲ್ಲಿ ಮನೆ ಮನೆಗೆ ತೆರಳಿ ಹಣ ಸಂಗ್ರಹಸುತ್ತಿದ್ದು, ಈ ಬಗ್ಗೆ ಕೆಲವರನ್ನು ಗಮನಿಸಿದಾಗ ಮತಾಂತರಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಆಗಮಿಸಿದ್ದಾರೆ ಎನಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈಗಾಗಲೇ ಮೂವರನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ತಂಡದಲ್ಲಿ ಬಂದ ಇನ್ನೂ ಹಲವಾರು ಇದ್ದಾರೆ ಎಂದು ಹೇಳಾಗುತ್ತಿದೆ..