ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ರವರ ಹುಟ್ಟುಹಬ್ಬದ ಅಂಗವಾಗಿ ಮುಂಡೂರು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಶ್ರೀ ಮೃತ್ಯುಂಜಯೇಶ್ವರ ದೇವಾಲಯ ಮತ್ತು ಮುಕ್ವೆ ಮಜಲುಮರು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಸೇವೆಯನ್ನು ಸಲ್ಲಿಸಲಾಯಿತು.

ವಿಶ್ವ ನಾಯಕನಿಗೆ ದೇಶ ಸೇವೆ ಮಾಡಲು ಶಕ್ತಿ ನೀಡುವಂತೆ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ, ಸದಸ್ಯರಾದ ಬಾಲಕೃಷ್ಣ ಪೂಜಾರಿ. ಹಿಂದೂ ಸಂಘಟನೆಗಳ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಪ್ರಮುಖರಾದ ಅನಿಲ್ ಕಣ್ಣರ್ನೂಜಿ, ಧನಂಜಯ ಕಲ್ಲಮ , ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಚಂದ್ರ ಕಡ್ಯ, ನಾರಾಯಣ ನಾಯ್ಕ್, ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಅಧ್ಯಕ್ಷರಾದ ಹರೀಶ್ ಬಿಕೆ, ಸಂತೋಷ್ ಮುಕ್ವೆ, ಜಗದೀಶ್ ಕಲ್ಲಮ, ಪ್ರತೀಕ್ ಪುತ್ತಿಲ, ರಾಧಾಕೃಷ್ಣ ಪುತ್ತಿಲ,ಪುರಂದರ ನಡುಬೈಲು, ಗಣೇಶ್ ಮುಕ್ವೆ, ಪವನ್, ಅಶ್ವಥ್,ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು..

