ವಿಟ್ಲ: ಪ್ರಧಾನಿ ನರೇಂದ್ರ ಮೋದಿ ರವರ ಹುಟ್ಟುಹಬ್ಬದ ಅಂಗವಾಗಿ ಟೀಮ್ ವಿಕ್ರಮ ಟ್ರಸ್ಟ್ ಬೆಂಗಳೂರು ಹಾಗೂ ಯೂತ್ ಬ್ರಿಗೇಡ್ ವಿಟ್ಲ ಇದರ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿವಪೂಜೆ ಸಲ್ಲಿಸಲಾಯಿತು.
ದೇಶದ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿಯವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಇನ್ನಷ್ಟೂ ಕಾಲ ದೇಶಸೇವೆಗೈಯುವ ಅವಕಾಶ ಸಿಗಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ವಿಟ್ಲ, ಶರತ್ ಎನ್.ಎಸ್, ಧರ್ಮೇಶ್ ಕುಮಾರ್, ಗಣೇಶ್ ಒತ್ತೆಸಾರ್, ನವೀನ್ ಕುಮಾರ್, ಧನುಷ್ ಉಪಸ್ಥಿತರಿದ್ದರು.