ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದಲ್ಲಿ ಟ್ಯಾಂಕರ್ ಲಾರಿಯಿಂದ ಬ್ಯಾಟರಿ ಕಳವು ನಡೆದ ಘಟನೆ ವರದಿಯಾಗಿದೆ.
ಕರ್ಮಾಜೆ ಮನೆ, ಕಳೆಂಜ ಗ್ರಾಮದ ನಿವಾಸಿ ರಕ್ಷಿತ್ ಕೆ (32) ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ಕೆಎ-21-ಬಿ-3160 ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಕಂಪನಿಯ ಟ್ಯಾಂಕರ್ ಲಾರಿಯನ್ನು ಏಪ್ರಿಲ್ 18 ರಂದು ರಾತ್ರಿ 11 ಗಂಟೆ ಸುಮಾರಿಗೆ ಗೋಳಿತೊಟ್ಟು ಗ್ರಾಮದ ರಸ್ತೆ ಬದಿಯಲ್ಲಿ ನಿಲ್ಲಿಸಿ ಮನೆಗೆ ತೆರಳಿದ್ದರು.
ಅನಂತರ ಏಪ್ರಿಲ್ 21 ರಂದು ಬೆಳಗ್ಗೆ 8.30 ಗಂಟೆ ವೇಳೆಗೆ ಲಾರಿಗೆ ಬಂದು ಚಾಲನೆ ಮಾಡಲು ಪ್ರಯತ್ನಿಸಿದಾಗ ಲಾರಿ ಚಾಲನೆ ಆಗದೇ ಇದ್ದುದರಿಂದ ಪರಿಶೀಲಿಸಿದಾಗ, ಲಾರಿಗೆ ಅಳವಡಿಸಲಾಗಿದ್ದ ಎರಡು ಬ್ಯಾಟರಿಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕಳವಾದ ಬ್ಯಾಟರಿಗಳ ಅಂದಾಜು ಮೌಲ್ಯ ರೂ. 27,000/- ಆಗಿದ್ದು, ಘಟನೆ ಏಪ್ರಿಲ್ 18ರ ರಾತ್ರಿ 11 ಗಂಟೆಯಿಂದ ಏಪ್ರಿಲ್ 21ರ ಬೆಳಗ್ಗೆ 8.30 ಗಂಟೆಯ ಮಧ್ಯದಲ್ಲಿ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 54/2026ರಡಿ BNS 2023ರ ಕಲಂ 303(2) ಅಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.


























