ವಿಟ್ಲ: ದ.ಕ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ದ.ಕ. ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಮತ್ತು ವಿಟ್ಲ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ವಿಟ್ಲ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ/ ಬಾಲಕಿಯರ ಜಿಲ್ಲಾ ಮಟ್ಟದ ನೆಟ್‌ಬಾಲ್ ಪಂದ್ಯಾಟ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.
ಅಂತಾರಾಷ್ಟ್ರೀಯ ನೆಟ್ ಬಾಲ್ ಕ್ರೀಡಾಪಟು ನಿತಿನ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ವಿಟ್ಲದ ಮಣ್ಣಿನಲ್ಲಿ ಆಡಿದವರು, ಶಿಕ್ಷಣ ಪಡೆದವರಿಗೆ ಎಲ್ಲಿಯೂ ಸೋಲು ಕಾಣುವುದಿಲ್ಲ. ಅವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಳಿದ್ದಾರೆ. ಮಕ್ಕಳು ಕ್ರೀಡಾ ಮನೋಭಾವ ಬೆಳೆಸಬೇಕು. ಕ್ರೀಡೆ ಬಗ್ಗೆ ನಿರಾಸಕ್ತಿ ತೋರಬಾರದು ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣು ಹೆಬ್ಬಾರ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ, ವಿಟ್ಲ ವಲಯ ದೈಹಿಕ ಶಿಕ್ಷಕ
ಸಂಘದ ಅಧ್ಯಕ್ಷೆ ರತ್ನಾವತಿ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜತ್ತಪ್ಪ ಗೌಡ, ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ನಿರ್ದೇಶಕ ಇಂದುಶೇಖರ್, ವಿಠಲ್ ಜೇಸಿ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಮೋಹನ ಎ, ನಿರ್ದೇಶಕ ಹಸನ್ ವಿಟ್ಲ, ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು, ಪ್ರಾಂಶುಪಾಲ ಜಯರಾಮ್ ರೈ, ವಿಠ್ಠಲ್ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ನಯನಾಕ್ಷಿ ಸ್ವಾಗತಿಸಿ, ಜಯಶ್ರೀ ನಿರೂಪಿಸಿದರು. ದೈಹಿಕ ಶಿಕ್ಷಕ ಭಾನುಪ್ರಕಾಶ್ ವಂದಿಸಿದರು.