ಭೋಪಾಲ್: ತಮ್ಮ 72ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್ ಗೆ ಎಂಟು ಚೀತಾಗಳನ್ನು ಬಿಡುಗಡೆ ಮಾಡಿದ್ದಾರೆ.
ಮಧ್ಯಪ್ರದೇಶದ ಕುನೋ ಉದ್ಯಾನವನದಲ್ಲಿ ಎಂಟು ಚೀತಾಗಳು ಸೇರಿಕೊಂಡಂತಾಗಿದ್ದು, ಇದರಲ್ಲಿ ಐದು ಹೆಣ್ಣು, ಮೂರು ಗಂಡು ಚೀತಾಗಳಿವೆ. ಭಾರತದ ಕಾಡುಗಳಿಂದ ಸುಮಾರು 70 ವರ್ಷಗಳಿಂದ ಕಣ್ಮರೆಯಾಗಿದ್ದ ಚೀತಾಗಳು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ದಿನವೇ ವಾಪಸ್ ಭಾರತದ ಕಾಡು ಸೇರಿದಂತಾಗಿದೆ.
ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಬಿ747 ಜಂಬೋ ಜೆಟ್ ವಿಮಾನದ ಮೂಲಕ ಎಂಟು ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಬರೋಬ್ಬರಿ 8,400 ಕಿಲೋ ಮೀಟರ್ ಪ್ರಯಾಣದ ಮೂಲಕ ಚೀತಾಗಳನ್ನು ಕರೆತರಲಾಗಿತ್ತು.
Prime Minister Narendra Modi released the cheetahs brought from Namibia, to their new home Kuno National Park in Madhya Pradesh. pic.twitter.com/8CgHmH8NF6
— ANI (@ANI) September 17, 2022
