ಪುತ್ತೂರು: ‘ಪ್ರಾಜೆಕ್ಟ್ ಚೀತಾ’ ಯೋಜನೆಯಲ್ಲಿ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಇಂದು ಎಂಟು ಚಿರತೆಗಳನ್ನು ವಿಶೇಷ ವಿಮಾನದಲ್ಲಿ ತರಲಾಯಿತು. ಭಾರತಕ್ಕೆ ಈ ತಳಿಯ
ಚಿರತೆಗಳನ್ನು ಮರು ಪರಿಚಯಿಸುವ ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆ.17 ರಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದರು. ನಮೀಬಿಯಾದಿಂದ ಚೀತಾ ತರುವ ತಂಡದಲ್ಲಿ ಪ್ರಮುಖರಲ್ಲಿ ಭಾರತೀಯ ಪಶುವೈದ್ಯರಾಗಿ, ವನ್ಯಜೀವಿ ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯ ಕುಟುಂಬದ ಸನತ್
ಕೃಷ್ಣ ಮುಳಿಯ ಕೂಡ ಪಾಲ್ಗೊಂಡಿದ್ದರು.

ನಮೀಬಿಯಾದ ಭಾರತೀಯ ಹೈಕಮಿಷನರ್ ಪ್ರಶಾಂತ್ ಅಗರ್‌ವಾಲ್ ಈ ಯೋಜನೆಯ ಮುಖ್ಯಸ್ಥರಾಗಿದ್ದರು. ಯದುವೇಂದ್ರ ದೇವ್, ವಿಕ್ರಂ ಸಿಂಗ್ ಮೊದಲಾದ ತಜ್ಞರು ಹಾಗೂ ವನ್ಯಜೀವಿ ತಜ್ಞ ಹಾಗೂ ಪಶುವೈದ್ಯರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯದ ದಿ.ಕೇಶವ ಭಟ್ ಹಾಗೂ ಉಷಾ ಮುಳಿಯ ಅವರ ಪುತ್ರ ಸನತ್ ಕೃಷ್ಣ
ಸನತ್ ರವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಎನ್ ಸಿಸಿ ಕೋಟಾದಲ್ಲಿ ಪಶುವೈದ್ಯ ಸೀಟು ಸಿಕ್ಕಿತ್ತು. ಅವರು ವಿವಿಧ ರಾಷ್ಟ್ರೀಯ ಉದ್ಯಾನವನಗಳು, ಡಿಸ್ಕವರಿ ಚಾನೆಲ್ ಇತ್ಯಾದಿಗಳಲ್ಲಿ ಸೇವೆ ಸಲ್ಲಿಸಿದ್ದರು.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ರವರು ಸನತ್ ಕುಮಾರ್ ರವರ ಜೊತೆ ಮಾತುಕತೆ ನಡೆಸಿದರು.

