ವಿಟ್ಲ: ದೂರವಾಣಿ ಕೇಬಲ್ ಕದಿಯಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕುದ್ರಿಯದಲ್ಲಿ ನಡೆದಿದೆ.
ಪುಣಚ ನಿವಾಸಿ ಸೇಸಪ್ಪ ಹಾಗೂ ಆತನ ಸಹಚರ ಕೇಬಲ್ ಕದಿಯಲು ಬಂದು ಸಿಕ್ಕಿ ಬಿದ್ದವರು.
ಸೇಸಪ್ಪ ಈ ಹಿಂದೆ ದಿನಗೂಲಿ ನೆಲೆಯಲ್ಲಿ ಬಿಎಸ್ಎನ್ಎಲ್ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕೆಲ ತಿಂಗಳ ಹಿಂದೆ ಕಳ್ಳತನದ ಆರೋಪದಲ್ಲಿ ಕೆಲಸ ಕಳೆದುಕೊಂಡಿದ್ದರು ಎನ್ನಲಾಗಿದೆ.
ಎರಡು ದ್ವಿಚಕ್ರ ವಾಹನದಲ್ಲಿ ಇಬ್ಬರು ಕದಿಯಲು ಬಂದಿದ್ದು, ಕೇಬಲ್ ಸಹಿತ ಅವರನ್ನು ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.