ವಿಟ್ಲ : ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಮನೆಯ ಪಕ್ಕದ ಬಾವಿಯಲ್ಲಿ ಪತ್ತೆಯಾದ ಘಟನೆ ಪುಣಚ ಗ್ರಾಮದ ಪೊಯ್ಯಮೂಲೆ ಎಂಬಲ್ಲಿ ನಡೆದಿದೆ.
ಮೃತರನ್ನು ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಪೊಯ್ಯಮೂಲೆ ನಿವಾಸಿ ಕೃಷ್ಣ ನಾಯ್ಕ್ (62)ಎಂದು ಗುರುತಿಸಲಾಗಿದೆ.
ಕೃಷ್ಣ ನಾಯ್ಕ್ ರವರು ನಿನ್ನೆ ಮದ್ಯಾಹ್ನ ಮನೆಯಿಂದ ಹೊರಗಡೆ ಹೋದವರು ಸಂಜೆಯಾದರೂ ಮನೆಗೆ ಹಿಂದುರಗದ ಕಾರಣ ಹಾಗೂ ಸಂಬಂಧಿಕರ ನೆರೆಮನೆಯವರು ಬಳಿಯೂ ಹೋಗದೆ ಕಾಣೆಯಾಗಿದ್ದಾರೆ ಎಂದು ಅವರ ಮಗ ನೀಡಿದ ದೂರಿನಂತೆ ವಿಟ್ಲ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆದರೆ ಇಂದು ಸಂಜೆಯ ವೇಳೆಗೆ ಅವರ ಮೃತದೇಹ ಮನೆಯ ಪಕ್ಕದ ಬಾವಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.