ಪುತ್ತೂರು: 5ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಲ್ಲೇಗ ಟೈಗರ್ಸ್ ವತಿಯಿಂದ ನವರಾತ್ರಿಯ ವಿಶೇಷವಾಗಿ ಅಕ್ಟೋಬರ್ 1 ರಂದು ಹುಲಿಕುಣಿತ ನಡೆಯಲಿದೆ.
ಈ ಹಿನ್ನಲೆಯಲ್ಲಿ ಇಂದು ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ದೇವಾಲಯದ ಅರ್ಚಕ ವಸಂತ ಕೆದಿಲಾಯ ಅವರು ಶ್ರೀ ದೇವರ ಎದುರು ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆ ವೇಳೆ ಖ್ಯಾತ ಸ್ಯಾಕ್ಸೋಫೋನ್ ವಾದಕ ಪಿ.ಕೆ ಗಣೇಶ್, ನಿತ್ಯಕರಸೇವಕ ತಂಡದ ಗಣೇಶ್ ಬನ್ನೂರು, ಗಿರೀಶ್ ಹಾಗೂ ಕಲ್ಲೆಗ ಟೈಗರ್ಸ್ ತಂಡದ ಎಲ್ಲಾ ಯುವಕರು ಭಾಗಿಯಾಗಿದ್ದರು.
ಅಕ್ಟೋಬರ್ 01 ರಂದು ಕಲ್ಲೇಗ ಟೈಗರ್ಸ್ ವತಿಯಿಂದ ಪುತ್ತೂರಿನ ಇತಿಹಾಸದಲ್ಲೆ ಪ್ರಪ್ರಥಮ ಭಾರಿಗೆ, ಸುಮಾರು 60 ಹುಲಿಗಳು ಬಣ್ಣ ಹಚ್ಚಿ ತಾಸೆಯ ಪೆಟ್ಟಿಗೆ ಕುಣಿದು ಎಲ್ಲರನ್ನೂ ರಂಜಿಸಲಿದೆ.
