ರಾಜ್ಯದ ಮಲೆನಾಡು ಪದೇ ಪದೇ ಸಂಘರ್ಷದ ಕೇಂದ್ರ ಬಿಂದುವಾಗ್ತಿತ್ತು. ಸಾಕಷ್ಟು ಗಲಾಟೆ, ಗಲಭೆಗಳಿಗೆ ಸಾಕ್ಷಿಯಾಗಿದ್ದ ಶಿವಮೊಗ್ಗದಲ್ಲಿ ಈಗ ಐಸಿಸ್ ಲಿಂಕ್ ಕೂಡ ಬೆಳೆದುಕೊಂಡಿದೆ. ಮೂವರು ಶಂಕಿತ ಉಗ್ರರ ಪೈಕಿ ಇಬ್ಬರು ಅರೆಸ್ಟ್ ಆಗಿದ್ರೆ, ಮತ್ತೋರ್ವ ಪರಾರಿಯಾಗಿದ್ದಾನೆ.
ಬಂಧಿತ ಶಂಕಿತರು ಮಂಗಳೂರು ಮೂಲದ ಮಾಜ್ ಮುನೀರ್ ಅಹಮದ್ ಹಾಗೂ ಶಿವಮೊಗ್ಗ ಸಿದ್ದೇಶ್ವರ ನಗರದ ಸಯ್ಯದ್ ಯಾಸೀನ್ ಮತ್ತೊಬ್ಬ ಶಂಕಿತ ಉಗ್ರ ತೀರ್ಥಹಳ್ಳಿಯ ಶಾರೀಕ್ ಮಹಮ್ಮದ್.

ಪ್ರೇಮ್‌ಸಿಂಗ್ ಕೇಸ್ ತನಿಖೆಯಲ್ಲಿ ಶಂಕಿತರ ಸುಳಿವು ಪತ್ತೆ..!!
ಕಳೆದ ಆಗಸ್ಟ್ 15 ರಲ್ಲಿ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದ ಪ್ರಮುಖ ಆರೋಪಿ ಜೀಬಿವುಲ್ಲಾನ ವಿಚಾರಣೆ ನಡೆದಿತ್ತು. ಈ ವೇಳೆ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಮಾಹಿತಿ ಸಿಕ್ಕಿತ್ತು. ಈ ಮೂವರ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಆತನ ಮೊಬೈಲ್ ಫೋನ್‌ನಲ್ಲಿ ಪತ್ತೆಯಾಗಿತ್ತು. ಉಗ್ರ ಸಂಘಟನೆ ಜೊತೆ ಸಂಪರ್ಕ ಶಂಕೆ ಮೇರೆಗೆ ಮೂವರ ವಿರುದ್ಧ ಎಫ್‌ಐಆರ್
ದಾಖಲಿಸಿದ್ದು, ಯಾಸೀನ್ ಮತ್ತು ಮಾಜ್ ಮುನೀರ್‌ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಅರೆಸ್ಟ್ ಆಗಿರುವ ಶಂಕಿತ ಉಗ್ರರಿಬ್ಬರ ಹಿನ್ನಲೆ ಭಯಾನಕವಾಗಿದೆ. ಈಗಾಗಲೇ ಈ ಉಗ್ರರು ಭಯೋತ್ಪದಕ ಚಟುವಟಿಕೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಮಲೆನಾಡಿನಲ್ಲಿ ಭಾರೀ
ವಿದ್ವಂಸಕ ಕೃತ್ಯ ಎಸಗಲು ಪ್ಲಾನ್ ಮಾಡಿದ್ರು ಎನ್ನಲಾಗುತ್ತಿದೆ.
ಸದ್ಯ ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಎಫ್.ಎಸ್.ಎಲ್ ತಂಡ ಎಂಟ್ರಿ ಕೊಟ್ಟಿದೆ. ಶಿವಮೊಗ್ಗ ನಗರದ ಹಳೇ ಗುರುಪುರದ ಬಯಲು ಪ್ರದೇಶದಲ್ಲಿ ಸ್ಫೋಟ ಗೊಳಿಸಲು ಸಂಚು ರೂಪಿಸಿದ್ರು. ಹೀಗಾಗಿ ಗುರುಪುರದ ತುಂಗಾನದಿ ದಡದ ಎಫ್.ಎಸ್.ಎಲ್ ತಂಡ ಆರೋಪಿಗಳ ಸ್ಥಳ ಮಹಜರು ಮಾಡಿದೆ.

ಒಂದೆಡೆ ಸ್ಥಳ ಮಹಜರು ನಡೀತಿದ್ರೆ, ಮತ್ತೊಂದೆಡೆ ಪೊಲೀಸರ ತಂಡ ಮಂಗಳೂರಿಗೆ ಭೇಟಿ ನೀಡಿದೆ. ಆರೋಪಿ ಮಾಜ್ ಮುನೀರ್ ಅಹ್ಮದ್ ವಾಸವಿದ್ದ ಪ್ಲಾಟ್ ನಲ್ಲಿ ಪರಿಶೀಲನೆ ನಡೆಸಿದೆ.
ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯ ಪ್ರೆಸಿಡೆನ್ಸಿ ಅವೆನ್ಯೂ ಫ್ಯಾಟ್ ಮಹಜರು ನಡೆದಿದೆ. ಸದ್ಯ ಬಂಧನವಾಗಿರುವ ಮಾಜ್ ಮುನೀರ್ ಮತ್ತು ಪರಾರಿಯಾಗಿರುವ ಶಾರೀಕ್, ಈ ಹಿಂದೆ 2020ರಲ್ಲಿ ಮಂಗಳೂರನ್ನೇ ಬೆಚ್ಚಿಬೀಳಿಸಿದ್ದ ಗೋಡೆ ಬರಹದ ಕೇಸ್ ನಲ್ಲಿ ಬಂಧಿತರಾಗಿದ್ದರು. ಮಂಗಳೂರಿನ ಅಪಾರ್ಟ್‌ಮೆಂಟ್ ಹಾಗೂ ನ್ಯಾಯಾಲಯದ ಆವರಣದ ಗೋಡೆಯ ಮೇಲೆ ಉಗ್ರರ ಪರ ಗೋಡೆ ಬರಹ ಬರೆದಿದ್ದರು ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಕರಾವಳಿಯಿಂದ ಈಗ ಮಲೆನಾಡಿಗೂ ಉಗ್ರರ ಜಾಲ ಬೆಳೆದುಕೊಂಡಿದ್ದು, ಬಟಾ ಬಯಲಾಗಿದೆ. ಮೊದಲೇ ಸಂಘರ್ಷದ ಕೇಂದ್ರ ಸ್ಥಾನವಾಗಿದ್ದ ಶಿವಮೊಗ್ಗದಲ್ಲಿ ಶಂಕಿತ ಉಗ್ರರು ಬಂಧನವಾಗಿರೋದೇ ಭೀತಿ ಹುಟ್ಟಿಸಿದೆ..
