Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ.50 ಲಕ್ಷ ವೆಚ್ಚದ ನೂತನ ಶೌಚಾಲಯಕ್ಕೆ ಶಿಲಾನ್ಯಾಸ..!

    ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ.50 ಲಕ್ಷ ವೆಚ್ಚದ ನೂತನ ಶೌಚಾಲಯಕ್ಕೆ ಶಿಲಾನ್ಯಾಸ..!

    ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗತವೈಭವ ಮರಳಿಸಲು ಸಂಘಟನೆ :ನೂತನ ಡಿಸಿಸಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸಂಕಲ್ಪ..!

    ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗತವೈಭವ ಮರಳಿಸಲು ಸಂಘಟನೆ :ನೂತನ ಡಿಸಿಸಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸಂಕಲ್ಪ..!

    ಎಂಡಿಎಂಎ ಮಾರಾಟಕ್ಕೆ ಯತ್ನ: ಆರೋಪಿ ಬಂಧನ.!

    ಎಂಡಿಎಂಎ ಮಾರಾಟಕ್ಕೆ ಯತ್ನ: ಆರೋಪಿ ಬಂಧನ.!

    (ಡಿ.8) :ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ರೈ,  ಜಿ.ಎಲ್.ಬಲರಾಮ ಆಚಾರ್ಯ, ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು..!

    (ಡಿ.8) :ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ರೈ, ಜಿ.ಎಲ್.ಬಲರಾಮ ಆಚಾರ್ಯ, ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು..!

    ಸಾರ್ವಜನಿಕ ಸೇವೆಯಲ್ಲಿ ವಿಳಂಬ, ಲಂಚದ ಬೇಡಿಕೆ ಆರೋಪ: ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಅಮಾನತು..!

    ಸಾರ್ವಜನಿಕ ಸೇವೆಯಲ್ಲಿ ವಿಳಂಬ, ಲಂಚದ ಬೇಡಿಕೆ ಆರೋಪ: ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಅಮಾನತು..!

    ಕೆದಂಬಾಡಿ: ಹೆತ್ತ ತಾಯಿಯನ್ನೇ  ಅತ್ಯಾಚಾರಗೈದ ಮಗ..!! ಮಹಿಳೆ ಆಸ್ಪತ್ರೆಗೆ ದಾಖಲು

    ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಮಗುವಿಗೆ ಜನ್ಮ : ಪ್ರಕರಣ ದಾಖಲು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಮುಳಿಯ ಕೃಷಿಕೋದ್ಯಮ : ಕೃಷಿಯನ್ನು ಉದ್ಯಮದ ರೀತಿಯಲ್ಲಿ ನೋಡಬೇಕಾಗಿದೆ – ಕೇಶವ ಪ್ರಸಾದ್ ಮುಳಿಯ

September 21, 2022
in ಪುತ್ತೂರು
0
ಮುಳಿಯ ಕೃಷಿಕೋದ್ಯಮ : ಕೃಷಿಯನ್ನು ಉದ್ಯಮದ ರೀತಿಯಲ್ಲಿ ನೋಡಬೇಕಾಗಿದೆ – ಕೇಶವ ಪ್ರಸಾದ್ ಮುಳಿಯ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಕೃಷಿಯನ್ನು ಉದ್ಯಮದಂತೆ ಉದ್ಯಮವನ್ನು ಕೃಷಿಯಂತೆ ನಡೆಸುವಂತಾಗಬೇಕು ಎನ್ನುವುದೇ ಕೃಷಿಕೋದ್ಯಮ ಕಾರ್ಯಕ್ರಮದ ಉದ್ದೇಶ ಎಂದು ಮುಳಿಯ ಪ್ರತಿಷ್ಠಾನದ ಕೇಶವ ಪ್ರಸಾದ್ ಮುಳಿಯ ಹೇಳಿದರು.

Advertisement
Advertisement

ಮುಳಿಯ ಪ್ರತಿಷ್ಠಾನ ಸಹಯೋಗದಲ್ಲಿ ಸೆ.20 ರಂದು ಪುತ್ತೂರು ಮುಳಿಯ ಜ್ಯುವೆಲ್ಸ್ ಶೋರೂಮ್ ಮೇಲ್ಗಡೆಯ ಅಪರಂಜಿ ರೂಫ್ ಗಾರ್ಡನ್‌ನಲ್ಲಿ ನಡೆದ ಕೃಷಿಕೋದ್ಯಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement
Advertisement

ಕೃಷಿಗೂ ಉದ್ಯಮಕ್ಕೂ ಎಲ್ಲಿಯ ನಂಟು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ. ಕೃಷಿ ಹಾಗೂ ಉದ್ಯಮ ಎರಡೂ ಪ್ರತ್ಯೇಕ ವಿಷಯ ಎಂದು ಹೇಳಿದರೂ, ಅವರೆಡಕ್ಕೂ ಪರಸ್ಪರ ನಂಟು ಇದೆ. ಕೃಷಿ ಕಾರ್ಯ ನಡೆಸುವಾಗ ಪ್ರತಿ ಗಿಡವನ್ನು ಕಾಳಜಿಯಿಂದ ಸಾಕಬೇಕು. ಅದರಿಂದ ಎಷ್ಟು ಸಾಧ್ಯವೋ ಅಷ್ಟು ಇಳುವರಿಯನ್ನು ಪಡೆದುಕೊಳ್ಳುವತ್ತ ಕೃಷಿಕರು ಗಮನ ಹರಿಸುತ್ತಾರೆ. ಇದೇ ರೀತಿ ಉದ್ಯಮದಲ್ಲಿ ಹೇಳುವುದಾದರೆ, ಪ್ರತಿಯೋರ್ವ ಗ್ರಾಹಕನತ್ತ ನಾವು ಗಮನ ಕೊಡಬೇಕು. ಆತನ ಬೇಡಿಕೆಗಳನ್ನು ಪೂರೈಸುತ್ತ ಚಿತ್ತ ಹರಿಸಬೇಕು. ಆಗ ಮಾತ್ರ ಗ್ರಾಹಕ ಹೆಚ್ಚಿನ ಉತ್ಪನ್ನ ಖರೀದಿಸಲು ಮುಂದಾಗುತ್ತಾನೆ. ಹಾಗಾಗಿ ಕೃಷಿ ಹಾಗೂ ಉದ್ಯಮವನ್ನು ಪರಸ್ಪರ ಬೆಸೆಯುವಂತಾದರೆ, ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಮಾಡಲು ಸಾಧ್ಯ ಎಂದರು.

Advertisement

ಸಾಮರ್ಥ್ಯ ಹಾಗೂ ಅವಕಾಶಗಳನ್ನು ಬಳಸಿಕೊಂಡು ಕೃಷಿ ಹಾಗೂ ಉದ್ಯಮ ಬೆಳೆಯುತ್ತದೆ. ರಾಜ್ಯ ರಾಜಧಾನಿಯಲ್ಲಿ ಹಣಕ್ಕೆ ಹೆಚ್ಚು ಪ್ರಾಶಸ್ತ್ಯ ಇರುವುದರಿಂದ ಅಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಆದರೆ ರಾಜಧಾನಿಯನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಕೃಷಿಯನ್ನು ಹೆಚ್ಚು ಬೆಳೆಸಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ತಕ್ಕನಾಗಿ ಶ್ರಮವನ್ನು ಹಾಕಬೇಕು. ವಾರದ 7 ದಿನವೂ, ಕಚೇರಿಯಲ್ಲಿ ದುಡಿದಂತೆ ತೋಟದಲ್ಲಿ ಕೆಲಸ ಮಾಡಲು ಸಿದ್ಧರಾಗಬೇಕು. ಹಾಗಾದರೆ ಮಾತ್ರ ಕೃಷಿಯಲ್ಲಿ ಬೆಳವಣಿಗೆ ಕಾಣಲು ಸಾಧ್ಯ ಎಂದರು.

ಇ-ಕಾಮರ್ಸ್, ಬ್ರಾಂಡಿಂಗ್ ಅಗತ್ಯ

ಕಾಸರಗೋಡು ಸಿಪಿಸಿಆರ್‌ಐನ ಚೀಫ್ ಟೆಕ್ನಿಕಲ್ ಆಫೀಸರ್ ಯಚ್. ಮುರಳೀಕೃಷ್ಣ ಮಾತನಾಡಿ, ಮನೆಮನೆಗಳಲ್ಲಿ ಐಟಿ – ಬಿಟಿ ಕಲಿತ ಯುವಕರಿದ್ದಾರೆ. ಆದರೂ ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ವಿಫಲರಾಗಿದ್ದೇವೆ. ಭಾರತದ ಅಡಿಕೆಗೆ ಧಾರ್ಮಿಕ ಟಚ್ ನೀಡಿ ಇರಾನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದ ಅಡಿಕೆಯನ್ನು ಉತ್ತರ ಭಾರತದಲ್ಲಿ ಇಂತಹ ಉತ್ಪನ್ನವಾಗಿ ಮಾರಾಟ ಮಾಡಲು ಯಾಕೆ ಪ್ರಯತ್ನಿಸಬಾರದು..!? ಪ್ರಸಕ್ತ ಸನ್ನಿವೇಶದಲ್ಲಿ ಇ-ಕಾಮರ್ಸ್, ಬ್ರಾಂಡಿಂಗ್ ಇಂದಿನ ಅಗತ್ಯತೆ ಇದೆ ಎಂದರು. ಕೃಷಿ ಸೇರಿದಂತೆ ಯಾವುದೇ ಉದ್ಯಮದಲ್ಲಿ ಸರಿಯಾದ ಗುರಿ ಇಲ್ಲದೇ ಯಶಸ್ಸು ಸಾಧ್ಯವಿಲ್ಲ. ಗುರಿಯೆಡೆಗೆ ನಾವು ಕೇಂದ್ರಿಕೃತರಾಗದೇ ಹೋದರೆ, ಗಮ್ಯ ತಲುಪಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಯನ್ನು ಉದ್ಯಮವಾಗಿ ಬೆಳೆಸಲು ಬೇಕಾದ ಚಾಕಚಕ್ಯತೆ ಕಡೆಗೆ ಗಮನ ಕೊಡುವುದು ಅಗತ್ಯ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಆರಂಭಿಸಲಾಗಿದೆ. ನಿರ್ವಹಣಾ ವೆಚ್ಚ, ಬೆಲೆ ಏರಿಳಿಕೆ ಎಲ್ಲದರ ಬಗ್ಗೆಯೂ ಇಲ್ಲಿ ಚರ್ಚೆ ನಡೆಸಲಾಗುತ್ತಿದೆ. ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಆಹಾರ ಜೊತೆಗೆ ಆದಾಯ:

ಕೇಂದ್ರ ಸರಕಾರದ ಚಿಂತನೆಯನ್ನು ಮುಳಿಯ ಪ್ರತಿಷ್ಠಾನ ಸಹಯೋಗದ ಕೃಷಿಕೋದ್ಯಮ ಕಾರ್ಯಕ್ರಮ ಜಾರಿಗೊಳಿಸಲು ಮುಂದಾಗಿದೆ. ಕೃಷಿಯನ್ನು ಉದ್ಯಮವಾಗಿ ಬೆಳೆಸಬೇಕೆಂಬುದೇ ಸರಕಾರದ ಧೋರಣೆಯೂ ಕೂಡ. ಒಂದು ಸಂದರ್ಭದಲ್ಲಿ ಆಹಾರದ ಅಭಾವ ಇತ್ತು. ಆದರೆ ಇಂದಿಲ್ಲ. ಇಂದು ಆಹಾರ ಬೆಳೆ ಹೆಚ್ಚಾಗಿದೆ. ಆದ್ದರಿಂದ ಆಹಾರವನ್ನು ಹೆಚ್ಚು ಬೆಳೆಸಬೇಕೆಂಬುದು ಸರಕಾರದ ಗುರಿಯೂ ಅಲ್ಲ. ಅದಕ್ಕೆ ಬದಲಾಗಿ, ಆಹಾರದ ಜೊತೆಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವತ್ತ ಸರಕಾರ ಗಮನ ಕೊಡುತ್ತಿದೆ ಎಂದ ಅವರು, 1 ಎಕರೆ ಜಾಗದಲ್ಲಿ ವರ್ಷಕ್ಕೆ 4-5 ಲಕ್ಷ ರೂ. ಉಳಿಸಬಹುದು ಎನ್ನುವುದು ಯಶಸ್ವಿ ಕೃಷಿ ಎಂದು ಉದಾಹರಿಸಿದರು.

ಕೃಷಿಕರಿಗೆ ಸಮಸ್ಯೆ ಆಗಿದೆ ಎಂದರೆ ಸರಕಾರ ಗಮನ ಕೊಡುವುದಿಲ್ಲ ಎಂಬ ಆರೋಪ ಇದೆ. ನಿಜವಾಗಿಯೂ ಸರಕಾರಕ್ಕೆ ಇದು ಆಸಕ್ತಿಯ ವಿಷಯ ಅಲ್ಲ. ಸರಕಾರ ಗಮನ ಕೊಡುವುದು, 2 ಎಕರೆಯೊಳಗಿನ ಕೃಷಿಕನ ಬಗ್ಗೆ. ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿ ಪಡೆಯುವುದು ಹಾಗೂ ನಗದೀಕರಣ ಆಗಬೇಕು ಎನ್ನುವುದೇ ಸರಕಾರದ ಧೋರಣೆ ಎಂದು ವಿವರಿಸಿದರು.

ಶೇ. 100ರಷ್ಟು ಶ್ರಮ ಹಾಕಿದರೆ ಮಾತ್ರ ಕೃಷಿ:

ಮಾ ಇಂಟಿಗ್ರೇಟರ್ಸ್ನ ಫೌಂಡರ್ ಅಶೋಕ್ ಕುಮಾರ್ ಮಾತನಾಡಿ, ಇರುವ ಮೂಲಗಳನ್ನು ಎಷ್ಟರಮಟ್ಟಿಗೆ ಬಳಸಿಕೊಂಡು, ದುಡಿದುಕೊಂಡು ಬಳಸಬೇಕು. ಅದಕ್ಕೆ ಒಂದು ವ್ಯವಸ್ಥೆಯನ್ನು ಮಾಡಿ, ಮುಂದುವರಿಸಿಕೊಂಡು ಹೋದರೆ ಅದನ್ನು ವ್ಯವಹಾರ ಎನ್ನುತ್ತೇವೆ. ನಮ್ಮ ಅಂಗಡಿಯನ್ನು ನಡೆಸಿದಂತೆ ಕೃಷಿಯನ್ನು ನಡೆಸಲು ಸಾಧ್ಯವಿಲ್ಲ. ಶೇ. 100ರಷ್ಟು ಮೂಲಗಳನ್ನು ಬಳಸಿಕೊಳ್ಳಬೇಕು, ಬಂಡವಾಳ ಹಾಕಬೇಕು, ಹಾಕಿದ ಬಂಡವಾಳವನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ತಿಳಿದಿರಬೇಕು. ವಾರದ 7 ದಿನದಲ್ಲಿ 24 ಗಂಟೆ ಅಂದರೆ ೩೬೨ ದಿನವೂ ಕೆಲಸ ಮಾಡುವುದೇ ಕೃಷಿ. ಇದರ ನಡುವೆ ಕಾರ್ಯಕ್ರಮ, ಉಳಿದ ಕೆಲಸಗಳನ್ನು ಬಿಡಬೇಕು. ಕೃಷಿಕರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸಮಾರೋಪ:

ಕಾರ್ಯಕ್ರಮದಲ್ಲಿ ಸಾವಯವ ಕೃಷಿಯ ಬಗ್ಗೆ ಡಾ. ವೇಣು ಕಳೆಯತ್ತೋಡಿ, ಕೃಷಿ ತಂತ್ರಗಾರಿಕೆ ಬಗ್ಗೆ ಶ್ರೀಹರಿಭಟ್ ಸಜಂಗದ್ದೆ, ನರ್ಸರಿ ಬಗ್ಗೆ ವೇಣುಗೋಪಾಲ್, ಇನ್ಸ್ಟಾ ಬಾಸ್ಕೆಟ್ ಕೃಷಿ ಮಳಿಗೆ ಬಗ್ಗೆ ಶ್ರೀಕೃಷ್ಣ ಮೋಹನ್, ಆಯುರ್ವೇದ ಮೂಲಿಕೆಗಳ ಕೃಷಿ ಬಗ್ಗೆ ಡಾ. ಹರಿಕೃಷ್ಣ ಪಾಣಾಜೆ, ಸುರಂಗ ನೀರಾವರಿ ಬಗ್ಗೆ ಗೋವಿಂದ ಭಟ್ ಮಾಣಿಲ, ಹೈನುಗಾರಿಕೆ ಬಗ್ಗೆ ಕಸ್ತೂರಿ ಅಡ್ಯಂತಾಯ, ಬಸಳೆ ಕೃಷಿ ಬಗ್ಗೆ ಸುರೇಶ್ ಗೌಡ, ತರಕಾರಿ ಕೃಷಿ ಬಗ್ಗೆ ಶ್ರೀರಾಮ ಭಟ್ಟ ಚೆನ್ನಾಂಗೋಡು, ಕೃಷಿ ಸಂಘಟನೆ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಅಭಿಪ್ರಾಯ ಮಂಡಿಸಿದರು. ವೇಣು ಶರ್ಮ ಕಾರ್ಯಕ್ರಮ ನಿರೂಪಿಸಿದರು.

Previous Post

ಮಲೆನಾಡಿನಲ್ಲಿ ಭೀತಿ ಹುಟ್ಟಿಸಿದ ಉಗ್ರರ ಹೆಜ್ಜೆ ಗುರುತು: ಕರಾವಳಿಯಿಂದ, ಮಲೆನಾಡಿಗೂ ಬೆಳೆದುಕೊಂಡ ಉಗ್ರರ ಜಾಲ:; ಬಗೆದಷ್ಟು ಸ್ಪೋಟಕ ಮಾಹಿತಿ ಬಯಲು

Next Post

ಅಚ್ಚರಿ ಮೂಡಿಸಿದ ಘಟನೆ: ಕೊರಗಜ್ಜನ ಪ್ರಾರ್ಥನೆಗೆ ಇರಿಸಿದ್ದ ವೀಳ್ಯದೆಲೆಯಲ್ಲಿ ಮೂಡಿದ ಬೇರು

OtherNews

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ.50 ಲಕ್ಷ ವೆಚ್ಚದ ನೂತನ ಶೌಚಾಲಯಕ್ಕೆ ಶಿಲಾನ್ಯಾಸ..!
ಪುತ್ತೂರು

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ.50 ಲಕ್ಷ ವೆಚ್ಚದ ನೂತನ ಶೌಚಾಲಯಕ್ಕೆ ಶಿಲಾನ್ಯಾಸ..!

September 24, 2026
(ಡಿ.8) :ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ರೈ,  ಜಿ.ಎಲ್.ಬಲರಾಮ ಆಚಾರ್ಯ, ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು..!
ಧಾರ್ಮಿಕ

(ಡಿ.8) :ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ರೈ, ಜಿ.ಎಲ್.ಬಲರಾಮ ಆಚಾರ್ಯ, ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು..!

September 24, 2026
ಸಾರ್ವಜನಿಕ ಸೇವೆಯಲ್ಲಿ ವಿಳಂಬ, ಲಂಚದ ಬೇಡಿಕೆ ಆರೋಪ: ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಅಮಾನತು..!
ಕ್ರೈಮ್

ಸಾರ್ವಜನಿಕ ಸೇವೆಯಲ್ಲಿ ವಿಳಂಬ, ಲಂಚದ ಬೇಡಿಕೆ ಆರೋಪ: ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಅಮಾನತು..!

September 24, 2026
ಕೆದಂಬಾಡಿ: ಹೆತ್ತ ತಾಯಿಯನ್ನೇ  ಅತ್ಯಾಚಾರಗೈದ ಮಗ..!! ಮಹಿಳೆ ಆಸ್ಪತ್ರೆಗೆ ದಾಖಲು
Featured

ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಮಗುವಿಗೆ ಜನ್ಮ : ಪ್ರಕರಣ ದಾಖಲು..!

September 24, 2026
ಪುತ್ತೂರು: ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ : ಪ್ರಾರ್ಥನೆ..!
Featured

ಪುತ್ತೂರು: ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ : ಪ್ರಾರ್ಥನೆ..!

September 23, 2026
ಪಿಲಿಗೊಬ್ಬು ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ..!!
ಪುತ್ತೂರು

ಪಿಲಿಗೊಬ್ಬು ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ..!!

September 23, 2026

Leave a Reply Cancel reply

Your email address will not be published. Required fields are marked *

Recent News

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ.50 ಲಕ್ಷ ವೆಚ್ಚದ ನೂತನ ಶೌಚಾಲಯಕ್ಕೆ ಶಿಲಾನ್ಯಾಸ..!

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ.50 ಲಕ್ಷ ವೆಚ್ಚದ ನೂತನ ಶೌಚಾಲಯಕ್ಕೆ ಶಿಲಾನ್ಯಾಸ..!

September 24, 2026
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗತವೈಭವ ಮರಳಿಸಲು ಸಂಘಟನೆ :ನೂತನ ಡಿಸಿಸಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸಂಕಲ್ಪ..!

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗತವೈಭವ ಮರಳಿಸಲು ಸಂಘಟನೆ :ನೂತನ ಡಿಸಿಸಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸಂಕಲ್ಪ..!

September 24, 2026
ಉಡುಪಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ – ಮಾದಕವಸ್ತು ಸೀಜ್‌; 9 ಮಂದಿ ಅರೆಸ್ಟ್‌..!

ಉಡುಪಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ – ಮಾದಕವಸ್ತು ಸೀಜ್‌; 9 ಮಂದಿ ಅರೆಸ್ಟ್‌..!

September 24, 2026
ನರ್ಸಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು – ಕೊಲೆ ಶಂಕೆ

ನರ್ಸಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು – ಕೊಲೆ ಶಂಕೆ

September 24, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.