ವಿಟ್ಲ: ವಿಠ್ಠಲ್ ಜೇಸಿ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್ & ಗೈಡ್ಸ್ ವಿದ್ಯಾರ್ಥಿಗಳು ಮೂಡಬಿದ್ರಿಯಲ್ಲಿ ನಡೆದ 2022ನೇ ಸಾಲಿನ ರಾಜ್ಯಪುರಸ್ಕಾರ ಪರೀಕ್ಷೆಗೆ ಹಾಜರಾದ 7 ವಿದ್ಯಾರ್ಥಿಗಳು ಕೂಡ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿ 100 ಶೇಕಡಾ ಫಲಿತಾಂಶ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.

ಸ್ಕೌಟ್ಸ್ ನ 2 ವಿದ್ಯಾರ್ಥಿಗಳು ಹಾಗೂ ಗೈಡ್ಸ್ ನ 5 ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಜೊತೆಗೆ ಸ್ಕೌಟ್ & ಗೈಡ್ಸ್ ನ ಎಲ್ಲಾ ಪಠ್ಯ ಅಭ್ಯಾಸ ಮಾಡಿ ಸಾಧನೆ ಗೈದಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ.

ಯಾಶಿಕಾ, ಮೇಧಾನಾಯಕ್, ತನ್ವಿಗೌರಿ, ದೃಶ್ಯ, ಶ್ರೀವರ್ಣ, ಧನುಷ್, ಮತ್ತು ದೀಪಕ್ ಈ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು 11ಪ್ರಾವಿಣ್ಯತಾ ಪದಕಗಳನ್ನು ಪೂರ್ಣಗೊಳಿಸಿ 3 ದಿನಗಳ ರಾಜ್ಯ ಪುರಸ್ಕಾರ ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶ ತಂದು ಕೊಟ್ಟದ್ದಕ್ಕಾಗಿ ಸಂಸ್ಥೆಯ ಆಡಳಿತಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವರ್ಗ ಹಾಗೂ ಇತರ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.