ಬಂಟ್ವಾಳ: ರಾಜ್ಯದಲ್ಲಿನ ಪ್ರಮುಖ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಇಲಾಖೆ ನಿರ್ದೇಶನದಂತೆ ಬಂಟ್ವಾಳ ಹಾಗೂ ವಿಟ್ಲ ಪೊಲೀಸರ ತಂಡ ಇಂದು ಮುಂಜಾನೆ ವೇಳೆ ಕಲ್ಲಡ್ಕ ಸಮೀಪದ ಬೋಳಂತೂರಿನ ವ್ಯಕ್ತಿಯೋರ್ವನ ಮನೆಗೆ ದಾಳಿ ನಡೆಸಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುತ್ತಿದೆ ಎಂದು ತಿಳಿದು ಬಂದಿದೆ.

ಬೊಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಎಂಬವರ ಪುತ್ರ ಮಹಮ್ಮದ್ ತಬ್ಸೀರ್ ಎಂಬವರ ಮನೆಗೆ ಮುಂಜಾನೆ ಮೂರು ಗಂಟೆ ವೇಳೆ ಪೊಲೀಸ್ ತಂಡ ದಾಳಿ ನಡೆಸಿದೆ. ಯಾವ ಪ್ರಕರಣಕ್ಕೆ ಎಂಬ ವಿಚಾರವನ್ನು ಪೊಲೀಸರು ಮಾಹಿತಿ ನೀಡಿಲ್ಲ.
ವಿಚಾರಣೆಯ ದೃಷ್ಟಿಯಿಂದ ಗೌಪ್ಯತೆ ಕಾಪಾಡಲು ರಾಜ್ಯ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಅವರು ಮಾಹಿತಿ ನೀಡುತ್ತಿಲ್ಲ ಎಂಬ ವಿಚಾರ ಲಭ್ಯವಾಗಿದೆ.
ರಾಜ್ಯದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಕುರಿತು ಈ ದಾಳಿ ನಡೆದಿದ್ದು, ತಬ್ಸೀರ್ ಗೆ ಸೇರಿದ ಎರಡು ಮನೆಗಳಿಗೆ ಅಂದರೆ ಒಂದು ಹಳೆಯ ಮನೆ ಹಾಗೂ ಹೊಸ ಮನೆಗಳಿಗೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ,ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ನಗರ ಠಾಣಾ ಪೋಲೀಸ್ ಎಸ್. ಐ.ಅವಿನಾಶ್, ಗ್ರಾಮಾಂತರ ಎಸ್ ಐ ಹರೀಶ್, ವಿಟ್ಲ ಎಸ್.ಐ.ಸಂದೀಪ್ ಸಹಿತ ಇಡೀ ಪೊಲೀಸ್ ತಂಡ ಮೊಕ್ಕಾಂ ಇದ್ದು ಭದ್ರತೆ ಒದಗಿಸಿ ತನಿಖೆ ನಡೆಸುತ್ತಿದೆ.
