ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ರವರ ಕುಟುಂಬಕ್ಕೆ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮತ್ತು ತಂಡದವರು 9 ಲಕ್ಷ ರೂ. ಸಹಾಯಧನವನ್ನು ನೀಡಿದ್ದಾರೆ.
ಕಪಿಲ್ ಮಿಶ್ರಾ ಪ್ರವೀಣ್ ಕುಟುಂಬಕ್ಕೆ 9 ಲಕ್ಷ ರೂ. ನೆರವು ನೀಡಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದು, ಪ್ರವೀಣ್ ರವರ ಪತ್ನಿಯ ಖಾತೆಗೆ ನೆಫ್ಟ್ ಮೂಲಕ ಹಣ ಜಮಾಯಿಸಿರುವುದಾಗಿ ತಿಳಿಸಿದ್ದಾರೆ.

ಕೆಲ ಸಮಯದ ಹಿಂದೆ ಉದ್ಯಮಿ ಮನೀಶ್ ಮುಂದ್ರಾ ಅವರು ಪ್ರವೀಣ್ ಕುಟುಂಬಕ್ಕೆ 11 ಲಕ್ಷ ರೂ. ನೆರವು ನೀಡಿದ್ದು, 11 ಲಕ್ಷ ರೂ.ಗಳನ್ನು ಪ್ರವೀಣ್ ಪತ್ನಿ ನೂತನಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದರು.





























