ಪುತ್ತೂರು: ಅಮ್ಚಿನಡ್ಕದ ಮುಖಾರಿಮೂಲೆ ನಿವಾಸಿಯಾದ ಇಬ್ರಾಹಿಂ ಮತ್ತು ಅವರ ಪತ್ನಿ ಉಮ್ರಾ ನಿರ್ವಹಿಸಲು ಶುಕ್ರವಾರದಂದು ಹೊರಡಲಿದ್ದು, ಅವರಿಗೆ ಬದ್ರಿಯಾಜಮಾಅತ್ ಕಮಿಟಿಯ ವತಿಯಿಂದ ಸನ್ಮಾನ ಕಾರ್ಯಕ್ರಮವು ಸೆ.21 ರಂದು ಅಮ್ಚಿನಡ್ಕದ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಸಿಎ ಖಾದರ್ ರವರು ವಹಿಸಿದರು. ಶಾಲು ಹೊದಿಸಿ ಸನ್ಮಾನಿಸಿದ ನಂತರ ಖತೀಬ್ ಅಬ್ದುಲ್ ಸಲಾಂ ಫೈಝಿ ಅವರ ಉಮ್ರಾ ಕರ್ಮವನ್ನು ಅಲ್ಲಾಹನು ಸ್ವೀಕರಿಸಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿ ಕಾರ್ಯದರ್ಶಿ ಕೆಕೆ ಅಬ್ದುಲ್ ಖಾದರ್ ಖಜಾಂಜಿ ಯೂಸುಫ್ ಹಾಜಿ , ಹಾಗೂ ಸಮಿತಿ ಸದಸ್ಯರಾದ ಹಸೈನಾರ್ ,ಹಮೀದ್, ಹಸೈನಾರ್ ಮುಖಾರಿಮೂಲೆ,ಇಬ್ರಾಹಿಂ, ಯೂಸುಫ್ ಹಾಜಿ, ಇಬ್ರಾಹಿಂ ಬಾತಿಷ ಝುಹ್ರಿ ಉಪಸ್ಥಿತರಿದ್ದರು.