ಬಂಟ್ವಾಳ: ತಾಲೂಕು ವೀರಕಂಭ ಗ್ರಾಮದ ಶ್ರೀಗಣೇಶೊತ್ಸವ ಸಮಿತಿ ಕೆಲಿಂಜ ಇದರ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸಂದೀಪ್ ಪೂಜಾರಿ ಪೆಲತ್ತಡ್ಕ ರವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯದರ್ಶಿಯಾಗಿ ಅಭಿಲಾಷ್ ಮಾಡದಾರ್, ಉಪಾಧ್ಯಕ್ಷರಾಗಿ ಶ್ರೀಧರ ಗೌಡ ವಳಗುಡ್ಡೆ, ಕೋಶಾಧಿಕಾರಿಯಾಗಿ ಮೋಹಿತ್ ಶೆಟ್ಟಿ ಮಾಡದಾರ್, ಜತೆ ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ ಕಂಪದಬೈಲು ಆಯ್ಕೆಯಾದರು.
ಕೆಲಿಂಜ ಶ್ರೀನಿಕೇತನ ಮಂದಿರದಲ್ಲಿ ಸಮಿತಿಯ ಅಧ್ಯಕ್ಷರಾದ ಚೇತನ್ ಶೆಟ್ಟಿ ಕರಿಂಕ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.