ಕೇಂದ್ರ ಸರ್ಕಾರವು ಪಿಎಫ್ಐ ಹಾಗೂ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೆ ರಾಜ್ಯಾದ್ಯಂತ ಪಿಎಫ್ಐ ಕಚೇರಿಗಳಿಗೆ ಬೀಗ ಜಡಿದಿದ್ದು, ಪುತ್ತೂರಿನ ಮುಖ್ಯ ರಸ್ತೆಯ ಕೆಪಿ ಕಾಂಪ್ಲೆಕ್ಸ್ ನಲ್ಲಿರುವ ಪಿಎಫ್ಐ ಕಚೇರಿಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಮುಂಜಾನೆ ಪೊಲೀಸ್ ಇಲಾಖೆ, ಪೌರಾಯುಕ್ತರ ಹಾಗೂ ಕಂದಾಯ ಇಲಾಖೆ ನೇತೃತ್ವದಲ್ಲಿ ಬೀಗ ಹಾಕಲಾಯಿತು.
ಪುತ್ತೂರಿನ ಮುಖ್ಯ ರಸ್ತೆಯ ಕೆಪಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿದ್ದ ಪಿಎಫ್ಐ ಕಚೇರಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಪೊಲೀಸ್ ಇಲಾಖೆ, ಪೌರಾಯುಕ್ತರ ಹಾಗೂ ಕಂದಾಯ ಇಲಾಖೆ ನೇತೃತ್ವದಲ್ಲಿ ಸೀಜ್ ಮಾಡಲಾಯಿತು.

