ಬಂಟ್ವಾಳ: ಅಮ್ಟಾಡಿ ಪಂಚಾಯತ್ ವ್ಯಾಪ್ತಿಯ ಲೋರೆಟ್ಟೂ ಎಂಬಲ್ಲಿ ಎಮ್ಮೆ ಮಾಂಸ ವ್ಯಾಪಾರ ಲೈಸೆನ್ಸ್ ಅರ್ಜಿ ಬಂದ ಹಿನ್ನೆಲೆ ಆ ಅರ್ಜಿಗೆ ಹಿಂದೂ ಜಾಗರಣ ವೇದಿಕೆ ಅಮ್ಟಾಡಿ ವಲಯದ ವತಿಯಿಂದ, ವಲಯದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಕ್ಷೇಪಣೆ ಮತ್ತು ಷಡ್ಯಂತ್ರದ ಬಗ್ಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಹಿಂಜಾವೇ ಪೂರ್ಣವಾದಿ ಕಾರ್ಯಕರ್ತರಾದ ಪ್ರಶಾಂತ ಕೆಂಪುಗುಡ್ಡೆ, ಮತ್ತು ಶರಣ್ ಕಾಮಾಜೆ, ಹರೀಶ್ ತಲೆಂಬಿಲ, ರವಿ ಕೆಂಪುಗುಡ್ಡೆ, ಹರೀಶ್ ಅಜೇಕಲ, ತಿಲಕ್ ನಲ್ಕೆಮಾರ್, ಸುಧೀಂದ್ರ ದೇವಿನಗರ, ಸಚಿನ್ ದೇವಿನಗರ, ಪ್ರಜ್ವಲ್ ದೇವಿನಗರ, ಸಂದೇಶ್ ದುರ್ಗಾನಗರ, ಸಂತೋಷ್ ದುರ್ಗಾ ನಗರ, ಉಪಸ್ಥಿತರಿದ್ದರು.