ಬೆಂಗಳೂರು: ಕರಾವಳಿ ಮೂಲದವರಾದ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಇದೀಗ ದಿಢೀರ್ ಆಗಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಚರ್ಚೆಯೊಂದು ಜೋರಾಗಿದೆ.
ರಾಜ್ಯ ರಾಜಕೀಯದಿಂದ ಕೇಂದ್ರ ಸಚಿವರಾಗುವ ಮಟ್ಟಿಗೆ ಬೆಳೆದಿರುವ ಶೋಭಾ ಕರಂದ್ಲಾಜೆ ಇದೀಗ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಪ್ರಸ್ತುತ ಇರುವ ಸರ್ ನೇಮ್ ‘ಕರಂದ್ಲಾಜೆ’ ಬದಲಿಗೆ ‘ಗೌಡ’ ಸೇರಿಸಲು ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದ್ದು, ಮುಂದೆ ಅವರ ಹೆಸರು ‘ಶೋಭಾ ಗೌಡ ಆಗುವ ಸಾಧ್ಯತೆ ಇದೆ.