ಪುತ್ತೂರು: ನಮ್ಮ ಲೇಔಟ್ ಗೆ ತೆರಳುವ ರಸ್ತೆ ಕೆಟ್ಟು ಹೋಗಿತ್ತು,ಕರೆಂಟ್ ಇರಲಿಲ್ಲ, ನೀರಿನ ವ್ಯವಸ್ಥೆಯೂ ಸರಿಯಾಗಿರಲಿಲ್ಲ…ಹಲವು ವರ್ಷಗಳಿಂದ ನಾವು ನಿತ್ಯ ನರಕ ಅನುಭವಿಸುತ್ತಿದ್ದೆವು.
ಕೊನೆಗೆ ನಮಗೆ ಸಹಾಯ ಮಾಡಿದ್ದು ಶಾಸಕ ಅಶೋಕ್ ರೈ,ಅವರು ಮಾಡಿದ ಉಪಕಾರ ಮರೆಯಲಾರೆವು, ಮುಂದಿನ ಚುನಾವಣೆಯಲ್ಲಿ ನಾವು ಅಶೋಕ್ ರೈ ಗೆ ವೋಟು ಹಾಕುತ್ತೇವೆ ಎಂದು ನರಿಮೊಗರು ಗ್ರಾಮದ ಅನಘಾ ಲೇಔಟ್ ನಿವಾಸಿಗಳು ಪ್ರತಿಜ್ಞೆ ಮಾಡಿದ್ದಾರೆ.
ಲೇಔಟ್ ನ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಲು ಶಾಸಕ ಅಶೋಕ್ ರೈ ತೆರಳಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಫಲಾನುಭವಿಗಳು ಶಾಸಕರು ಮಾಡಿದ ಉಪಕಾರವನ್ನು ನೆನೆಸಿಕೊಂಡರು. ಇದೇ ಸಂದರ್ಭದಲ್ಲಿ ಸೇರಿದ ಮಂದಿ ಗ್ರಾಮ ದೇವರು ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿ ನಾವು ಮುಂದೆ ನಿಮ್ಮೊಟ್ಟಿಗೇ ಇರುವುದಾಗಿ ಹೇಳಿದರು. ಕೃತಜ್ಞತಾದ ಗ್ರಾಮಸ್ಥರಿಗೆ ಶಾಸಕರು ಅಭಿನಂದಿಸಿದರು.



























