ಪುತ್ತೂರು: ಕಷ್ಟದಲ್ಲಿರುವ ಬಡ ಕುಟುಂಬವೊಂದಕ್ಕೆ ನೆರವಿನ ಹಸ್ತ ಚಾಚುವ ಮೂಲಕ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಇದರ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.
ಅರಿಯಡ್ಕ ಗ್ರಾಮದ ಎಂಡೆಸಾಗುವಿನ ಸಾರಮ್ಮ ಎಂಬವರ ಪುತ್ರ ಕಳೆದ 32 ವರ್ಷಗಳಿಂದ ಮನೆಯಲ್ಲಿ ತಾಯಿಯ ಆರೈಕೆಯಲ್ಲಿದ್ದು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಬಡ ಮಹಿಳೆಯ ನಿವಾಸಕ್ಕೆ ಆ.9ರಂದು ಭೇಟಿ ನೀಡಿದ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಅವರಿಗೆ ಆರ್ಥಿಕ ನೆರವಿನ ಚೆಕ್ ಅನ್ನು ಹಸ್ತಾಂತರಿಸಿದರು.
ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಶ್ರೀ ವಿಷ್ಣು ಯುವಶಕ್ತಿ ಬಳಗವು, ಸಂಕಷ್ಟದಲ್ಲಿರುವ ಕುಟುಂಬದ ಪರಿಸ್ಥಿತಿಯನ್ನು ಅರಿತು ಈ ನೆರವನ್ನು ನೀಡಿದ್ದು ಬಳಗದ ಈ ಸತ್ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಂಘಟನೆಯ ಪ್ರೋತ್ಸಾಹಕರಾದ ಚಂದ್ರಿಕಾ ಸ್ವಾಮಿನಗರ ಹಾಗೂ ಸುಜಾತಾ ರೈ ಸ್ವಾಮಿನಗರ ಅವರು ಸಾರಮ್ಮ ಅವರಿಗೆ ಚೆಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಮಯೂರ ಮಾತನಾಡಿ ಸಂಘಟನೆಯ ಈ ಒಂದು ಮಾನವೀಯತೆ ಕಾರ್ಯಕ್ಕೆ ಕೈ ಜೋಡಿಸಿ ಆರ್ಥಿಕವಾಗಿ ಸಹಾಯ ಮಾಡಿದ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಇದರ ಮಾಜಿ ಅಧ್ಯಕ್ಷ ಉದಯ ಸ್ವಾಮಿನಗರ, ಅಧ್ಯಕ್ಷ ಲೋಕೇಶ್ ಸ್ವಾಮಿನಗರ, ಉಪಾಧ್ಯಕ್ಷ ಸುಜಿತ್ ಶೇಖಮಲೆ, ಪ್ರಧಾನ ಕಾರ್ಯದರ್ಶಿ ಹರೀಶ್ ಮಡಿವಾಳ ಕೋಡಿಯಡ್ಕ, ಸದಸ್ಯರಾದ ಸಮಿತ್ ಮಜ್ಜಾರ್, ವಿನೋದ್ ಸ್ವಾಮಿನಗರ, ಯತೀಶ್ ನಾಯ್ಕಕಪಾರ ಬೆಳ್ಳಿಪ್ಪಾಡಿ, ಹೇಮಚಂದ್ರ ಕೋಡಿಯಡ್ಕ, ರಾಜೇಶ್ ಗೌಡ ಗೋಳ್ತಿಲ, ಭುವನ್ ಮಚ್ಚಾರ್, ಭವಿತ್ ಸ್ವಾಮಿನಗರ ಉಪಸ್ಥಿತರಿದ್ದರು.




























