ಸುಳ್ಯ: ಸ್ಕೂಟಿಗೆ ಮಾರುತಿ ಕಾರು ಡಿಕ್ಕಿ ಹೊಡೆದ ಹಿನ್ನೆಲೆ ದ್ವಿಚಕ್ರ ವಾಹನದಲ್ಲಿದ್ದ ಕಾಲೇಜು ವಿದ್ಯಾರ್ಥಿ ಮೃತಪಟ್ಟು, ಜೊತೆಗಿದ್ದ ಆತನ ಸಹೋದರಿ ಗಂಭೀರ ಗಾಯಗೊಂಡ ಘಟನೆ ಎಲಿಮಲೆಯಲ್ಲಿ ನಡೆದಿದೆ.

ಬಾಜಿನಡ್ಕ ದೇವಿಪ್ರಸಾದ್ ಎಂಬವರ ಪುತ್ರ, ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ನಿಶಾಂತ್ ಮೃತ ಯುವಕ.
ಎಲಿಮಲೆ ಮತ್ತು ಜಬಳೆ ಮಧ್ಯೆ ಈ ಅಪಘಾತ ಸಂಭವಿಸಿದ್ದು, ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ನಿಶಾಂತ್ ರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.
ನಿಶಾಂತ್ ಸಹೋದರಿ ಮೋಕ್ಷ ಳಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ..

























