ಪುತ್ತೂರು: ‘ಪಿಲಿ ರಾಧಣ್ಣ’ ಮತ್ತು ಬಳಗದ ಊದು ಪೂಜೆ ಕಾರ್ಯಕ್ರಮವು ಅ.4 ರಂದು ಸಂಜೆ 7 ಗಂಟೆಗೆ ಕೊಂಬೆಟ್ಟು ಆದಿದ್ರಾವಿಡ ಬ್ರಾಹ್ಮಣ ಸಭಾಂಗಣದಲ್ಲಿ ನಡೆಯಲಿದೆ.
‘ಪಿಲಿ ರಾಧಣ್ಣ’ ಮತ್ತು ಬಳಗದ 46ನೇ ವರ್ಷದ ಹುಲಿ ಕುಣಿತ ಕಾರ್ಯಕ್ರಮವು ಅ.5 ರಂದು ಬೆಳಗ್ಗೆ 10 ಗಂಟೆಯಿಂದ ಹಲವು ಕಡೆಗಳಲ್ಲಿ ನಡೆಯಲಿದೆ.
ಸುಮಾರು 46 ವರುಷಗಳಿಂದ ಹುಲಿ ವೇಷ ಹಾಕಿ ಜನರನ್ನು ಮನರಂಜಿಸುತ್ತಿರುವ ‘ಪಿಲಿ ರಾಧಣ್ಣ’ ಮತ್ತು ಬಳಗವು ಪುತ್ತೂರು ಮಾತ್ರವಲ್ಲದೇ ಜಿಲ್ಲೆಯ ಇನ್ನೂ ಹಲವು ಕಡೆಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ..