ಪುತ್ತೂರು: ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಜೆಸಿಐ ಪುತ್ತೂರು ವತಿಯಿಂದ ಧನ್ವಂತರಿ ಲ್ಯಾಬೋರೇಟರಿ ಅವರ ಸಹಕಾರದೊಂದಿಗೆ ‘ಮಧುಮೇಹ ತಪಾಸಣಾ’ ಕ್ಯಾಂಪ್ ನ್ನು ಜೆಸಿಐ ಪುತ್ತೂರಿನ ಆಫೀಸ್ ಹಾಲ್ ನಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಜೆಸಿಐ ಪುತ್ತೂರಿನ ಪೂರ್ವಾಧ್ಯಕ್ಷರಾದ ಜೆಸಿ. ಹೆಚ್.ಜಿ. ಎಫ್ ಡಾ. ರವೀಂದ್ರ ರವರು ಉದ್ಘಾಟಿಸಿ, ಆರೋಗ್ಯ ಮಾಹಿತಿಯನ್ನು ನೀಡಿದರು.ಸಮಾರಂಭದ ಅಧ್ಯಕ್ಷತೆಯನು ಪುತ್ತೂರಿನ ಅಧ್ಯಕ್ಷೆ ಜೆ. ಸಿ ಸ್ವಾತಿ ಜೆ ರೈ ರವರು ವಹಿಸಿದರು.
ಪೂರ್ವಾಧ್ಯಕ್ಷರಾದ ಜೆಸಿ ಜಗನ್ನಾಥ್ ರೈ, ವಲಯಾಧಿಕಾರಿ ಪಶುಪತಿ ಶರ್ಮ,ಉಪಾಧ್ಯಕ್ಷ ರಘು ಶೆಟ್ಟಿ,ಜೆಸಿರೇಟ್ ಶಿಲ್ಪಾ ಪುರುಷೋತ್ತಮ್ ಶೆಟ್ಟಿ,ಸುಹಾಸ್ ಮರಿಕೆ, ಋತ್ವಿಕ್,ನವೀನ್ ಶೆಟ್ಟಿ,ಜೆಸಿ ಕೃಷ್ಣ ಪ್ರಸಾದ್, ಜೆಸಿ ಮಾಲಿನಿ ಕಶ್ಯಪ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಜೆಸಿ ಸದಸ್ಯರು ಉಪಸ್ಥಿತರಿದ್ದರು. ಜೆಸಿಐ ಸದಸ್ಯರ ಬ್ಲಡ್ ಚೆಕ್ ಅಪ್ ಮಾಡಲಾಯಿತು.ಧನ್ವಂತರಿ ಲ್ಯಾಬೋರೆಟರಿನ ಲ್ಯಾಬ್ ಟೆಕ್ನಿಷಿಯನ್ಸ್ ಹಬೀಬ್ ಮತ್ತು ಅನ್ವರ್ ಬ್ಲಡ್ ಚೆಕ್ ಅಪ್ ಕಾರ್ಯ ನಿರ್ವಹಿಸಿದರು.ಕಾರ್ಯಕ್ರಮವನ್ನು ಕಾರ್ಯದರ್ಶಿ ತಿಲಕ್ ರಾಜ್ ವಂದಿಸಿದರು.
ಪುತ್ತೂರು ನ್ಯಾಯಾಲಯದ ಆವರಣದಲ್ಲಿ ವಕೀಲರುಗಳಿಗೆ, ಸಾರ್ವಜನಿಕರಿಗೆ, ಕೋರ್ಟ್ ಸಿಬ್ಬಂದಿಗಳಿಗೆ ಬ್ಲಾಕ್ ಚೆಕ್ ಅಪ್ ಕ್ಯಾಂಪ್ ಆಯೋಜಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಜೆಸಿ ಮನೋಹರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ 75 ಮಂದಿ ರಕ್ತ ಪರೀಕ್ಷೆ ಮಾಡಿಸಿಕೊಂಡರು.
ಜೆಸಿ ಅಧ್ಯಕ್ಷೆ,ಕಾರ್ಯದರ್ಶಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು, ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ಜೆಸಿ ಚೇತನ್ ಪ್ರಕಾಶ್, ಧನ್ವಂತರಿ ಲ್ಯಾಬೋರೇಟರಿ ಯವರು ನಿರ್ವಹಿಸಿದರು.