ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ರುದ್ರಗಿರಿ ಘಟಕ ಕಾರಿಂಜ ಬಂಟ್ವಾಳ ತಾಲೂಕು ವತಿಯಿಂದ ಕಾರಿಂಜ ಕ್ರಾಸ್ ವಗ್ಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಾರ್ವಜನಿಕ ಬಸ್ ತಂಗುದಾಣ ಮತ್ತು ಭಗವಾಧ್ವಜ ಕಟ್ಟೆಯನ್ನು ಅ.9 ರಂದು ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿಂ.ಜಾ.ವೇ. ರಾಜ್ಯ ಪ್ರಮುಖರಾದ ರವಿರಾಜ್ ಬಿಸಿರೋಡ್, ವಿಭಾಗ ಪ್ರಮುಖರಾದ ರತ್ನಾಕರ್ ಶೆಟ್ಟಿ ಕಲ್ಲಡ್ಕ , ಅಜಿತ್ ಹೊಸಮನೆ, ಜಿಲ್ಲಾ ಸಹ ಸಂಯೋಜಕರಾದ ನರಸಿಂಹ ಮಾಣಿ, ಬಾಲಕೃಷ್ಣ ಕಲಾಯಿ ಹಾಗೂ ತಾಲೂಕು ಪ್ರಮುಖರು ಪರಿವಾರ ಸಂಘಟನೆಯ ಪ್ರಮುಖರು ಮತ್ತು ಸ್ಥಳೀಯ ಹಿರಿಯರು ಉಪಸ್ಥಿತರಿದ್ದರು.

ಹಿಂ.ಜಾ.ವೇ.ರಾಜ್ಯ ಪ್ರಮುಖರಾದ ರವಿರಾಜ್ ಬಿಸಿರೋಡ್ ಮಾತನಾಡಿ, ಹಿಂದೂ ಜಾಗರಣ ವೇದಿಕೆಯ ಸ್ಥಳೀಯ ಕಾರ್ಯಕರ್ತರನ್ನು ಮತ್ತು ಸಹಕರಿಸಿದ ಎಲ್ಲರನ್ನು ಅಭಿನಂದಿಸುತ್ತಾ ಸ್ವಚ್ಛ ಸದೃಢ ಸಮಾಜ ನಿರ್ಮಾಣದತ್ತ ಗಮನಹರಿಸುವಂತೆ ಕರೆ ನೀಡಿದರು.

ಜಿಲ್ಲಾ ಸಹ ಸಂಯೋಜಕರಾದ ನರಸಿಂಹ ಮಾಣಿ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಶ್ರೀಕ್ಷೇತ್ರ ಕಾರಿಂಜದ ಸಂರಕ್ಷಣೆ ಮತ್ತು ಅದಕ್ಕೆ ಪೂರಕವಾಗಿ ಸಮಾಜ ಜಾಗೃತಗೊಂಡು ಕೆಲಸಮಾಡುವತ್ತ ಮುಂದಾಗಬೇಕು ಮತ್ತು ಯಾವುದೇ ಒಳ್ಳೆಯ ಕೆಲಸಮಾಡುವಾಗ ಕೊಂಕು ಮಾತುಗಳು ಅಪಹಾಸ್ಯಗಳು ಸರ್ವೇಸಾಮಾನ್ಯ ಅವುಗಳನ್ನೆಲ್ಲ ನಿರ್ಲಕ್ಷಿಸಿ ಸದೃಢ ಸಮಾಜ ನಿರ್ಮಾಣದತ್ತ ಮುಂದಾಗೋಣ ಎಂದು ನೂತನ ಸಾರ್ವಜನಿಕ ಬಸ್ ತಂಗುದಾಣದ ನಿರ್ಮಾಣದಲ್ಲಿ ಕೈಜೋಡಿಸಿದ ಎಲ್ಲರಿಗೂ ಅಭಿನಂದಿಸಿದರು.

ಈ ವೇಳೆ ಬಸ್ ತಂಗುದಾಣದ ನಿರ್ಮಾಣದ ಕಾರ್ಯದಲ್ಲಿ ಶ್ರಮಿಸಿದ ಶರತ್ ಕುಮಾರ್ ಮತ್ತು ನಮಿತ್ ಬೊಲ್ಲೊಟ್ಟು ರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.

























