Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

    ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

    ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

    ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

    ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

    ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

    ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!

    ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!

    ಅನಾರೋಗ್ಯ ಪೀಡಿತರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘದಿಂದ ಧನಸಹಾಯ..!

    ಅನಾರೋಗ್ಯ ಪೀಡಿತರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘದಿಂದ ಧನಸಹಾಯ..!

    ಗುಂಡ್ಯ–ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಕಡವೆ ಮೃತ್ಯು..!

    ಗುಂಡ್ಯ–ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಕಡವೆ ಮೃತ್ಯು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

(ಅ.26) ಪುತ್ತೂರು: ರೈ ಎಸ್ಟೇಟ್‌ ಎಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರದ ‘ದಶ ಸಂಭ್ರಮ’ : ಟ್ರಸ್ಟ್ ಫಲಾನುಭವಿಗಳ ಸಮಾವೇಶ ಮತ್ತು ವಸ್ತ್ರ ವಿತರಣೆ ಕಾರ್ಯಕ್ರಮ :; ಸಮಾಲೋಚನಾ ಸಭೆ

October 9, 2022
in ಪುತ್ತೂರು
0
(ಅ.26) ಪುತ್ತೂರು: ರೈ ಎಸ್ಟೇಟ್‌ ಎಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರದ ‘ದಶ ಸಂಭ್ರಮ’ : ಟ್ರಸ್ಟ್ ಫಲಾನುಭವಿಗಳ ಸಮಾವೇಶ ಮತ್ತು ವಸ್ತ್ರ ವಿತರಣೆ ಕಾರ್ಯಕ್ರಮ :; ಸಮಾಲೋಚನಾ ಸಭೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ದೀಪಾವಳಿಯ ಅಂಗವಾಗಿ ರೈ ಎಸ್ಟೇಟ್ ಎಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್‌ನ ದಶ ಸಂಭ್ರಮದ ಕಾರ್ಯಕ್ರಮದಲ್ಲಿ ಈ ವರ್ಷ ಸುಮಾರು 26000 ಮಂದಿಗೆ ವಸ್ತ್ರ ವಿತರಣೆ ನಡೆಯಲಿದೆ.

Advertisement
Advertisement

Advertisement
Advertisement

ಕಾರ್ಯಕ್ರಮವು ಅ.26 ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಆಯೋಜಿಸಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೆ.ಎಸ್ ಹೇಳಿದರು. ಮರೀಲ್ ಪುತ್ತೂರು ಕ್ಲಬ್‌ನಲ್ಲಿ ಅ.8 ರಂದು ಸಂಜೆ ನಡೆದ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಪ್ರತಿವರ್ಷ ಕೋಡಿಂಬಾಡಿಯಲ್ಲಿರುವ ರೈ ಎಸ್ಟೇಟ್‌ನಲ್ಲಿ ದೀಪಾವಳಿಗೆ ವಸ್ತ್ರ ವಿತರಿಸಲಾಗುತ್ತಿತ್ತು. ಈಗ ರಸ್ತೆ ಅಗಲೀಕರಣದಲ್ಲಿ ಮನೆಯಂಗಲ ಕಿರಿದಾಗಿದೆ. ಅಲ್ಲದೆ ಕಳೆದ ಎರಡು ವರ್ಷಗಳ ಹಿಂದೆ ಸುಮಾರು 12,800 ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿದೆ. ಹೀಗಾಗಿ ವರ್ಷ ದೊಡ್ಡ ಪ್ರಮಾಣದಲ್ಲಿ ಜನರು ಸೇರುವ ನಿರೀಕ್ಷೆ ಇದ್ದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಆಯೋಜಿಸಿಕೊಳ್ಳಲಾಗಿದೆ. ಈ ವರ್ಷ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಆಯೋಜಿಸಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. 11 ಗಂಟೆಯಿಂದ ಅನ್ನಸಂತರ್ಪಣೆ ಪ್ರಾರಂಭಗೊಳ್ಳಲಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೋನಾದಿಂದಾಗಿ ವಸ್ತ್ರ ವಿತರಣೆ ಸಾಧ್ಯವಾಗಿಲ್ಲ. ಹೀಗಾಗಿ ಈವರ್ಷ ಅಧಿಕ ಸಂಖ್ಯೆಯಲ್ಲಿ ಜನರ ಆಗಮಿಸಲಿದ್ದು ಸುಮಾರು 26000 ಮಂದಿಗೆ ವಸ್ತ್ರ ವಿತರಿಸಲಾಗುವುದು. ಅಲ್ಲದೆ ಹೆಚ್ಚುವರಿಯಾಗಿ 5000 ಮಂದಿಗೆ ಬೇಕಾದಷ್ಟು ಸಂಗ್ರಹಿಸಿಡಲಾಗುವುದು. ಈ ಎಲ್ಲಾ ಕಾರ್ಯಕ್ರಗಳ ಯಶಸ್ಸಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಿ, ಸಹಕರಿಸಬೇಕು ಎಂದು ಅಶೋಕ್ ರೈ ತಿಳಿಸಿದರು.
ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 6.20ಕ್ಕೆ ಸ್ಪರ್ಧೆ ನಡೆಯಲಿದೆ.

ಮನೆಯಲ್ಲಿ ತಯಾರಿಸಿದ ಗೂಡುದೀಪಗಳೊಂದಿಗೆ ಸ್ಪರ್ಧೆಯಲ್ಲಿಭಾಗವಹಿಸಬಹುದು. ಅಲ್ಲದೆ ಕಾರ್ಯಕ್ರಮದಲ್ಲಿ ಅಡಿಕೆ ಕೊಯ್ಯುವವರು, ಬುಟ್ಟಿ ಹೆಣೆಯುವವರು, ಪೋಸ್ಟ್‌ಮೆನ್, ಪವರ್‌ಮೆನ್, ಆಟೋ ಚಾಲಕ, ಬೀಡಿ ಹಾಗೂ ಹೈನುಗಾರಿಕೆಯಲ್ಲಿ ಕುಟುಂಬ ನಿರ್ವಹಣೆ ಮಾಡುವಂತ ಸ್ವಾಭಿಮಾನಿ ಬಡವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

90 ಮನೆ ನಿರ್ಮಾಣ, 15,800 ಮನೆಗೆ ಧನ ಸಹಾಯ:

ನಮ್ಮ ಟ್ರಸ್ಟ್‌ನಿಂದ 10 ವರ್ಷಗಳಲ್ಲಿ 15,800 ಮನೆಗೆ ನೇರ ಧನಸಹಾಯ ನೀಡಲಾಗಿದೆ. ನಮ್ಮ ಟ್ರಸ್ಟ್ ದೇಣಿಗೆ ನೀಡಿರುವದೇ ಯಾರಿಂದಲೂ ಪಡೆದುಕೊಂಡಿಲ್ಲ. ನಮ್ಮ ಸಂಪಾದನೆಯ ಒಂದು ಪಾಲು ಬಡವರ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಮನೆಯಿಲ್ಲದವರಿಗೆ ವಾಸಕ್ಕೆ ಯೋಗ್ಯವಾದ 90 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ವಿವಿಧ ಕಾರಣಗಳಿಂದ ಮಾಶಾಸನ ಪಡೆಯುವವರಿಗೆ ಸಹಕಾರ, ವಿದ್ಯುತ್, ನೀರಿನ ಸಂಪರ್ಕವಿಲ್ಲದವರಿಗೆ ಸೌಲಭ್ಯ, ಮನೆ ಕಟ್ಟಲು ನಾನಾ ಕಾರಣಗಳಿಂದ ವಂಚಿತರಾಗಿದ್ದವರಿಗೆ ಸಹಕಾರ, ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗದ ಬಡವರಿಗೆ ಟ್ರಸ್ಟ್‌ನ ಜನರಿಗೆ ತಲುಪಿಸುವ ಕಾರ್ಯವಾಗಿದೆ. ಇದಕ್ಕಾಗಿ ಕಚೇರಿ ತೆರದು ಅಲ್ಲಿ ಸಿಬಂದಿಗಳನ್ನು ನೇಮಕ ಮಾಡಲಾಗಿದೆ. 10 ವರ್ಷಗಳಿಂದ ನಿರಂತರ ಸೇವೆ ನೀಡುತ್ತಾ ಬಂದಿದೆ.
ಟ್ರಸ್ಟ್‌ನ ಮುಖಾಂತರ 400 ಯುವಕರಿಗೆ ವಾಹನ ಚಾಲನಾ ತರಬೇತಿ ಹಾಗೂ ಲೈಸನ್ಸ್, 4000 ಮಹಿಳೆಯರಿಗೆ ಟೈಲರಿಂಗ್ ತರಬೇತಿ ಹಾಗೂ ಮೆಶಿನ್, 3400 ಮಂದಿ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ನೋಂದಾವಣೆ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಹಾಗೂ ಪಾನ್‌ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಕೊಡಲಾಗಿದೆ. ನಾನಾ ಕಾರಣಗಳಿಂದ ಅಕ್ರಮ-ಸಕ್ರಮ, 94ಸಿಯ ಹಕ್ಕುಪತ್ರ ಪಡೆಯಲು ಅಸಾಧ್ಯವಾಗಿದ್ದವರಿಗೆ ಅವುಗಳನ್ನು ಒದಗಿಸಿಕೊಡುವ ಮೂಲಕ ಸಮಾಜದಲ್ಲಿ ಕಷ್ಟದಲ್ಲಿದ್ದವರ ಕಣ್ಣೀರು ಒರೆಸುವ ಕೆಲಸ ಟ್ರಸ್ಟ್‌ನ ಮೂಲಕ ನಡೆಸಲಾಗಿದೆ ಎಂದು ಅಶೋಕ್ ರೈಯವರು ತಿಳಿಸಿದರು.

ಗ್ರಾಮ ಸಮಿತಿ ರಚನೆ:

ಕಾರ್ಯಕ್ರಮದ ಯಶಸ್ವಿಗಾಗಿ ಪುತ್ತೂರಿನ 44 ಗ್ರಾಮಗಳಲ್ಲಿಯೂ ಸಭೆಗಳನ್ನು ನಡೆಸಿ ಅಲ್ಲಿ ಸಮಿತಿಗಳನ್ನು ರಚಿಸಿಕೊಳ್ಳಲಾಗುವುದು ಎಂದು ಅಶೋಕ್ ರೈಯವರು ತಿಳಿಸಿದರು. ವಿವಿಧ ಗ್ರಾಮಗಳಿಂದ ಬಂದಿರುವವರನ್ನು ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಸೇರಿಸಿಕೊಳ್ಳಲಾಯಿತು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಅಶೋಕ್ ರೈಯವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಬಡವರ ಕಷ್ಟಗಳಿಗೆ ಸ್ಪಂಧಿಸುವ ಮನೋಭಾವ ಅವರಲ್ಲಿದೆ. ತನ್ನ ಸಂಪಾದನೆಯ ಒಂದು ಭಾಗವನ್ನು ಬಡವರ ಅಭಿವೃದ್ಧಿಗಾಗಿ ಮೀಸಲಿಡುತ್ತಾರೆ. ತನ್ನ ಹುಟ್ಟು ಹಬ್ಬವನ್ನು ಏಡ್ಸ್ ಪೀಡಿತರೊಂದಿಗೆ ಆಚರಿಸುವಂತ ಸರಳ ಮನೋಭಾವದವರಾಗಿದ್ದಾರೆ. ಬಡರನ್ನು ಒಟ್ಟು ಸೇರಿಸುವ ಅಶೋಕ್ ರೈಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ನಾನು ಸಹಕಾರಿ ಸಂಘದ ಅಧ್ಯಕ್ಷನಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಅಶೋಕ್ ರೈಯವರ ಅಭಿಮಾನಿಯಾಗಿ ಭಾಗವಹಿಸಿದ್ದೇನೆ. ಪಕ್ಷ, ಜಾತಿ, ಮತ, ಬೇಧವಿಲ್ಲದೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಕೈಜೋಡಿಸಬೇಕು. ಈ ಕಾರ್ಯಕ್ರಮವು ಪುತ್ತೂರಿನ ಇತಿಹಾಸದ ಪುಟದಲ್ಲಿ ಮೂಡಿಬೇಕು ಎಂದರು.

ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕವಾಗಿ ಸ್ಪಂಧಿಸುತ್ತಿರುವ ಅಶೋಕ್ ರೈಯವರು ವ್ಯಕ್ತಿಯಲ್ಲ. ಅವರು ಒಬ್ಬ ಶಕ್ತಿ. ಪಾಣಾಜೆ ರಣಮಂಗಲ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಯಶಸ್ವೀಯಾಗಿ ನೆರವೇರುವಲ್ಲಿ ಅಶೋಕ್ ರೈಯವರು ಪಾತ್ರ ಪ್ರಮುಖವಾಗಿದೆ. ಅವರ ಮೇಲೆ ದೊಡ್ಡ ಋಣವಿದೆ. ಅದರನ್ನು ತೀರಿಸುತ್ತೇವೆ ಎಂದರು. ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಮಾಮೇಶ್ವರ ಶ್ರೀಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ನಾಯ್ತೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ:

ಕಾಂತಾರ ಕನ್ನಡ ಚಲನಚಿತ್ರದಲ್ಲಿ ಗುತ್ತಿನ ಮನೆಯ ಯಜಮಾನನಾಗಿ ಪಾತ್ರವಹಿಸಿದ ಎರ್ತೂರು ರಾಜೀವ ರೈಯವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.

ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿದರು. ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿ ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು ವಂದಿಸಿದರು.

Previous Post

ಕಾರಿಂಜ: ಹಿಂ.ಜಾ.ವೇ. ರುದ್ರಗಿರಿ ಘಟಕದ ವತಿಯಿಂದ ನಿರ್ಮಿಸಲಾದ ಸಾರ್ವಜನಿಕ ಬಸ್ ತಂಗುದಾಣ ಮತ್ತು ಭಗವಾಧ್ವಜ ಕಟ್ಟೆ ಉದ್ಘಾಟನೆ

Next Post

ಸುಬ್ರಹ್ಮಣ್ಯ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ : 16 ಮಂದಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು..!!

OtherNews

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!
Featured

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

October 3, 2026
ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!
ಕ್ರೈಮ್

ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

October 3, 2026
ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!
Featured

ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!

October 3, 2026
ಅನಾರೋಗ್ಯ ಪೀಡಿತರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘದಿಂದ ಧನಸಹಾಯ..!
ಪುತ್ತೂರು

ಅನಾರೋಗ್ಯ ಪೀಡಿತರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘದಿಂದ ಧನಸಹಾಯ..!

October 3, 2026
ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ
Featured

ವಿಟ್ಲದಲ್ಲಿ ಹಣ ಪಣಕ್ಕಿಟ್ಟು ಕೋಳಿ ಅಂಕ: ನಾಲ್ವರು ವಶಕ್ಕೆ..!!

October 3, 2026
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!
ಕ್ರೈಮ್

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

October 1, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

October 3, 2026
ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

October 3, 2026
ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

October 3, 2026
‘ಜೂಲಿ’ ಸಿನಿಮಾನಲ್ಲಿ ನಟನೆ ಮಾಡಿದ್ದ ಖ್ಯಾತ ಬಾಲಿವುಡ್ ನಟ ಅರೆಸ್ಟ್..!

‘ಜೂಲಿ’ ಸಿನಿಮಾನಲ್ಲಿ ನಟನೆ ಮಾಡಿದ್ದ ಖ್ಯಾತ ಬಾಲಿವುಡ್ ನಟ ಅರೆಸ್ಟ್..!

October 3, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.