ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿ ಗಂಗಾಧರ ಅವರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘಟನೆಯ ವತಿಯಿಂದ ₹10 ಸಾವಿರ ಧನಸಹಾಯ ನೀಡಲಾಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಪುತ್ತೂರಿನ ಹಿಂದವಿ ಕಚೇರಿಯಲ್ಲಿ ಧನಸಹಾಯವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ನಿರ್ದೇಶಕ ರೂಪೇಶ್ ನಾಯ್ಕ್, ಅರುಣ ಸಾರಥಿ ಆಟೋ ಚಾಲಕರ ಸಂಘಟನೆಯ ಪ್ರಮುಖರಾದ ಸಂದೇಶ್ ನಾಯ್ಕ್ ಕೆಯ್ಯೂರು, ಸಚಿನ್ ವಳತ್ತಡ್ಕ, ಸ್ವಸ್ತಿಕ್ ಗೌಡ ತಾರಿಗುಡ್ಡೆ, ಗುರುಪ್ರಸಾದ್ ದೊಡ್ಡಡ್ಕ ಮೊದಲಾದವರು ಉಪಸ್ಥಿತರಿದ್ದರು.
ಅರುಣ ಸಾರಥಿ ಸಂಘಟನೆಯ ವತಿಯಿಂದ ಈವರೆಗೆ ಅನಾರೋಗ್ಯ ಪೀಡಿತರಿಗೆ ಒಟ್ಟು ₹2.50 ಲಕ್ಷ ಧನಸಹಾಯ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


























