ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಸಂದರ್ಭ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಮತ್ತು ಹೊರ ಬರಲು ಸುಲಭವಾಗುವಂತೆ ದೇವಳದ ಮುಖ್ಯರಸ್ತೆಯಲ್ಲಿ ದ್ವಿಪಥ ವ್ಯವಸ್ಥೆಗೆ ಡಿವೈಡರ್ ಸಮರ್ಪಣೆ ಎ.೯ರಂದು ನಡೆಯಿತು.
ಜಿನಸು ವ್ಯಾಪಾರಸ್ಥ ಜಯರಾಮ ಪೈ ಮತ್ತು ಬಳಗದವರು ಡಿವೈಡರ್ ನೀಡಿದ ದಾನಿಯಾಗಿದ್ದು, ಅವರು ದೇವಳಕ್ಕೆ ಮೂರು ಕಾಣಿಕೆ ಡಬ್ಬಿಯನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು. ದೇವಳದ ಪ್ರಧಾನ ಅರ್ಚಕರೂ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಿ.ಎಸ್ ಭಟ್ ಪ್ರಾರ್ಥನೆ ಸಲ್ಲಿಸಿ ವೈದಿಕ ಕಾರ್ಯಕ್ರಮ ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಡಿವೈಡರ್ ಅನ್ನು ಲೋಕರ್ಪಾಣೆಗೊಳಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ ಗೌಡ, ಬಿ.ಐತಪ್ಪ ನಾಯ್ಕ ಅವರು ಉಪಸ್ಥಿತರಿದ್ದರು.