ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಮಂತ್ರಣ ಪತ್ರಿಕೆಯನ್ನು ಮುಸ್ಲಿಂ ಜಮತ್ ಕಮಿಟಿಗೆ ಅಂಚೆ ಮೂಲಕ ಕಳುಹಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳಾಗಿದ್ದು ಈ ಕುರಿತಂತೆ ಸ್ಪಷ್ಟೀಕರಣ ನೀಡಲಾಗಿದೆ. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಮಾತನಾಡಿ “ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಆಮಂತ್ರಣವನ್ನು ಪುತ್ತೂರು ತಾಲೂಕಿನ ಗಣ್ಯರಿಗೆ ಮತ್ತು ಕಟ್ಟೆ ಪೂಜೆಯ ಮನೆಗಳಿಗೆ, ಸಮಿತಿಗಳಿಗೆ ಅಂಚೆ ಮೂಲಕ ಕಳಿಸುವ ಒಂದು ಲಿಸ್ಟ್ ದೇವಸ್ಥಾನದ ದಾಖಲೆಯಲ್ಲಿ ಇದೆ. ಆ ಪಟ್ಟಿಯಂತೆ ಬಹಳ ಹಿಂದಿನಿಂದಲೂ ಈ ಮುಸ್ಲಿಂ ಜಮತ್ ಕಮಿಟಿಗೆ ಈ ಆಮಂತ್ರಣ ಹೋಗುತ್ತಿತ್ತು. ಅದರೆ ಇದು ಇಷ್ಟು ಸಮಯದಲ್ಲಿ ಅಥವಾ ಇಷ್ಟು ವರ್ಷದಲ್ಲಿ ಈ ರೀತಿಯ ಪ್ರಚಾರ ಅಗುತ್ತಿರಲಿಲ್ಲ. ಇದು ಈಗಿನ ಆಡಳಿತ ಮಂಡಳಿ ಮಾಡಿದ ನಿರ್ಧಾರವಲ್ಲ ಸಮಸ್ತ ಜನತೆ ಮುಂದೆ ಅಗಬೇಕಾದ ಧರ್ಮದ ಕಾರ್ಯಕ್ರಮಕ್ಕೆ ಅಡಳಿತ ಕಮಿಟಿಯ ಜೋತೆ ಕೈ ಜೋಡಿಸೋಣ”- ಎಂದು ಹೇಳಿದ್ದಾರೆ.