ಬೆಳ್ಳಾರೆ: ಇಲ್ಲಿನ ಮೇಲಿನ ಪೇಟೆಯಲ್ಲಿನ ಸಿಂಡಿಕೇಟ್ ಬ್ಯಾಂಕ್ ಬಳಿ ಕಾರ್ಯಾಚರಿಸುತ್ತಿರುವ ಶ್ರೀ ಮೊಬೈಲ್ ಸರ್ವೀಸಸ್ ಅಂಗಡಿಯಿಂದ ಮೊಬೈಲ್ ಕಳವುಗೈದ ಘಟನೆ ಗುರುವಾರದಂದು ನಡೆದಿದೆ. ಎ. 08ರಂದು ರಾತ್ರಿ ವೇಳೆ ಬೀಗ ಒಡೆದು ಒಳನುಗ್ಗಿದ ಕಳ್ಳರು ನಗದು ಹಾಗೂ ಸರ್ವೀಸ್ ಗೆಂದು ಇಡಲಾದ ಹಲವು ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಮಾಲಕ ಗುಣ ಎಂಬವರು ಬೆಳ್ಳಾರೆ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದರು, ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ , ಖದೀಮರ ಪತ್ತೆಗಾಗಿ ಬಲೆಬೀಸಿದ್ದಾರೆ.