ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೆಶ್ವರ ದೇವರ ಜಾತ್ರೋತ್ಸವ ಎ.10ರಿಂದ ಸಂಪ್ರದಾಯದಂತೆ ಆರಂಭಗೊಳ್ಳಲಿದೆ. ಜಾತ್ರಾ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಲಿಚ್ಚಿಸುವವರು ಆನ್ಲೈನ್ ಮೂಲಕ ನೋಂದಾವಣೆ ಮಾಡಿಸಿಕೊಳ್ಳಬಹುದು. ಆನ್ಲೈನ್ ಅರ್ಜಿಯಲ್ಲಿ ಹೆಸರು, ವಿಳಾಸ, ಭಾವಚಿತ್ರ, ಆಧಾರ್ ಕಾರ್ಡ್, ಮೊಬೈಲ್ ನಂಬರ್ ನಮೂದಿಸಿ ಲಿಂಕ್ ಕಳುಹಿಸಿದರೆ ಸಾಕು. ಅವರ ಹೆಸರು ದೇವಳದ ಕಚೇರಿಯಲ್ಲಿ ನೋಂದವಾಣೆ ಆಗುತ್ತದೆ. ಬಳಿಕ ಅವರಿಗೆ ಮುಂದಿನ ಮಾಹಿತಿಯನ್ನು ದೇವಳದಿಂದ ನೀಡಲಾಗುವುದು ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಮುಳಿಯ ಕೇಶವ ಪ್ರಸಾದ್ ತಿಳಿಸಿದರು.
ಸ್ವಯಂ ಸೇವಕರಾಗಲು ಇಚ್ಛಿಸುವವರು ಈ ಕೆಳಗಿನ ಲಿಂಕ್ ನ್ನು ಕ್ಲಿಕಿಸಿ 👇
https://volunteerreg.a1logics.live/webpages/VolunteerReg.aspx