ಪುತ್ತೂರು : ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನದಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಿದ್ಧತೆಗಳಾಗುತ್ತಿರುವ ಆರಂಭದಲ್ಲಿ ಏ.11ರಂದು ಚಪ್ಪರ ಮುಹೂರ್ತ ಕಾರ್ಯಕ್ರಮವೂ ನಡೆಯಿತು.
ಇದೇ ದಿನ ಕೋಟಿ ಚೆನ್ನಯರ ಜನ್ಮಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಪೂರಕವಾಗಿ ಎರುಕೋಟ್ಯದಲ್ಲಿ ಚಪ್ಪರ ಮುಹೂರ್ತ ನಡೆಯುವ ಸಮಯಕ್ಕೆ ವಿಸ್ಮಯವೊಂದು ನಡೆದಿದೆ. ಜನ್ಮಸ್ಥಾನದ ತೀರ್ಥಬಾವಿಯಲ್ಲಿ ನಾಗದೇವನ ಹೆಡೆರೂಪ ಗೋಚರಿಸಿದ್ದು ಬಹಳ ಹೊತ್ತಿನತನಕವೂ ಎಲ್ಲಾ ಭಕ್ತರಿಗೂ ಕಾಣಿಸಿಕೊಂಡಿದ್ದು ಭಕ್ತಜನ ಕಣ್ತುಂಬಾ ನೋಡಿ ಧನ್ಯರಾಗಿದ್ದಾರೆ. ಇಂಥದ್ದೊಂದು ವಿಶೇಷ ಸನ್ನಿವೇಶ ನಿಜಕ್ಕೂ ಆಶ್ಚರ್ಯವನ್ನು ಸೃಷ್ಟಿಸಿದೆ.