ಪುತ್ತೂರು : ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮದ ಹಿನ್ನೆಲೆಯಲ್ಲಿ ಮೇ.22 ರಂದು ಪುತ್ತೂರಿನಲ್ಲಿ ಜರುಗಲಿರುವ ತುಳುನಾಡ ಐಸಿರ – 2021 ರ ಆಮಂತ್ರಣ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಒಡಿಯೂರು ಶ್ರೀ ಷಷ್ಟ್ಯಬ್ಧ ಸಂಭ್ರಮ ಸಮಿತಿ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಹಯೋಗದೊಂದಿಗೆ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ತುಳುನಾಡ ಐಸಿರ-2021 ಜರುಗಲಿದೆ.
ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಕೆ. ಸೀತಾರಾಮ ದುರ್ಗಾಪ್ರಸಾದ್ ರೈ, ಶ್ರೀಗಳ ಷಷ್ಟ್ಯಬ್ಧ ಸಮಿತಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ನ್ಯಾಯವಾದಿ ಮಹೇಶ್ ಕಜೆ, ಉಪಾಧ್ಯಕ್ಷರಾದ ಚಿಕ್ಕಪ್ಪ ನ್ಯಾಕ್, ಬೂಡಿಯಾರ್ ರಾಧಾಕೃಷ್ಣ ರೈ, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಪುತ್ತಿಲ, ಕೊಡಗು ಶ್ರೀ. ಕ್ಷೇ. ಧ. ಗ್ರಾ. ಯೋಜನಾಧಿಕಾರಿ ಸೀತಾರಾಮ ಶೆಟ್ಟಿ, ಒಡಿಯೂರು ಗುರುದೇವಾನಂದ ಸೇವಾ ಬಳಗದ ಗೌರವಾಧ್ಯಕ್ಷ ಮತ್ತು ಶ್ರೀಗಳ ಷಷ್ಟ್ಯಬ್ಧ ಸಮಿತಿ ಗೌರವ ಮಾರ್ಗದರ್ಶಿ ದೇವಪ್ಪ ನೋಂಡಾ, ಮಹಿಳಾ ಸಂಯೋಜಕಿಯರಾದ ಪ್ರೇಮಲತಾ ರಾವ್, ನಯನಾ ರೈ, ಕಾರ್ಯದರ್ಶಿ ರಂಜಿನಿ ಶೆಟ್ಟಿ, ನವೀನ್ ರೈ ಪಂಜಳ, ಮಹೇಶ್ ಕಜೆ ಅವರ ಪತ್ನಿ ದೀಪಿಕಾ ಕಜೆ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಚಿತ್ರಾ : ನವೀನ್ ಸ್ಟುಡೀಯೊ