ದೆಹಲಿಯ ಶ್ರದ್ಧಾ ಮರ್ಡರ್ ಮಿಸ್ಟ್ರಿ ಕೇಳಿ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಅಫ್ತಾಬ್ ಪ್ರೀತಿಯ ಮೋಸಕ್ಕೆ ಬಲಿಯಾದ ಶ್ರದ್ಧಾಳ ದೇಹ, ದಿಕ್ಕಿಕ್ಕೊಂದು ಚೆಲ್ಲಾಪಿಲ್ಲಿಯಾಗಿದ್ದವು. ದಿನಕ್ಕೊಂದು ಹೇಳಿಕೆ ನೀಡಿ ಪೊಲೀಸರ ತನಿಖೆಯ ಹಾದಿ ತಪ್ಪಿಸುತ್ತಿರೋ ಕ್ರೂರಿಯ ರಕ್ತ ಚರಿತ್ರೆ ಕೇಳಿ ದೇಶದ ಜನ ಇನ್ನೂ ಆತಂಕದಲ್ಲೇ ಇದ್ದಾರೆ. ಈ ಪ್ರಕರಣ ಇನ್ನೂ ಹಸಿ ಹಸಿ ಇರುವಾಗಲೇ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಶ್ರದ್ಧಾಳ ಹತ್ಯೆ ಪ್ರಕರಣದ ರೀತಿಯಲ್ಲೇ ಪಕ್ಕದ ಛತ್ತೀಸ್ಗಢದಲ್ಲೂ ಮತ್ತೊಬ್ಬ ಯುವತಿಯನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ 24 ವರ್ಷದ ಪ್ರಿಯಾಂಕಾ ಸಿಂಗ್ ಎಂಬ ಯುವತಿಯನ್ನ ಹತ್ಯೆ ಮಾಡಲಾಗಿದೆ.
ಕೊಲೆ ಮಾಡಿ ಒಂದಲ್ಲ, ಎರಡಲ್ಲ, ಬರೋಬ್ಬರಿ ನಾಲ್ಕು ದಿನ ಪ್ರಿಯಾಂಕ ಮೃತದೇಹವನ್ನ ಕಾರಿನಲ್ಲೇ ಇಡ್ಕೊಂಡಿದ್ದ ಹಂತಕ ಆಶೀಶ್ ಸಾಹು. ಛತ್ತೀಸ್ಗಢದ ಬಿಲಾಸ್‌ಪುರದಲ್ಲಿ ಪ್ರಿಯಾಂಕ ಸಿಂಗ್ ಕೊಲೆ ನಡೆದಿದೆ. ಕತ್ತು ಹಿಸುಕಿ, ಪ್ರಿಯಾಂಕಳನ್ನ ಆಶೀಶ್ ಸಾಹು ಕೊಲೆ ಮಾಡಿದ್ದಾಗಿ ತನಿಖೆ ವೇಳೆ ಬಯಲಿಗೆ ಬಂದಿದೆ.
ಕ್ರೂರಿಯ ಕರಾಳ ರೂಪ ಅದೆಷ್ಟಿತ್ತೆಂದ್ರೆ, ಪ್ರಿಯಾಂಕಾಳನ್ನ ಹತ್ಯೆಗೈದು ಬರೋಬ್ಬರಿ 3 ದಿನಗಳ ಕಾಲ ಮೃತದೇಹವನ್ನ ಕಾರಿನಲ್ಲೇ ಇಟ್ಕೊಂಡಿದ್ದ. ಪಾಲಿಥಿನ್ ಕವರ್‌ನಲ್ಲಿ ಮೃತದೇಹ ಸುತ್ತಿಟ್ಟಿದ್ದ. ಮೃತದೇಹದ ವಾಸನೆ ಬರದಂತೆ, ರೂಂ ಪ್ರೆಶರ್ ಕೂಡ ಹೊಡೆದಿದ್ನಂತೆ.. ಆದ್ರೆ 4ನೇ ದಿನ ಮೃತದೇಹವನ್ನ ಸಾಗಿಸಲು ಪ್ಲಾನ್ ಮಾಡಿದ್ದಾಗ, ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಹೌದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸ್ತಿದ್ದ ಪ್ರಿಯಾಂಕ ಸಿಂಗ್, ಆಶೀಶ್ ಸಾಹುನನ್ನ ಮೆಡಿಕಲ್ ಶಾಪ್‌ವೊಂದರಲ್ಲಿ ಪರಿಚಯವಾಗಿದ್ದು, ತದನಂತರ ಷೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಆಶೀಶ್ ಬಳಿ ಪ್ರಿಯಾಂಕ ಸಲಹೆ ಕೇಳಿದ್ದು. ಹೀಗಾಗಿ ಹಣ ನನಗೆ ಕೊಡು ನಾನು ಹೂಡಿಕೆ ಮಾಡಿ ಬಂದ ಲಾಭ ನಿನಗೆ ಕೊಡ್ತೀನಿ ಅಂದಿನ್ನಂತೆ ಆರೋಪಿ. ಆದ್ರೆ ಅಷ್ಟೊತ್ತಿಗೆ ಷೇರು ಪೇಟೆಯಲ್ಲಿ ಹಾಕಿದ್ದ ಹಣ, ಸಂಪೂರ್ಣ ನಷ್ಟವಾಗಿತ್ತು. ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಆಶೀಶ್ ಸಾಹುಗೆ ಕೊಟ್ಟ ಹಣವನ್ನ ಪ್ರಿಯಾಂಕ ಮರಳಿ ಕೇಳಿದ್ಳಂತೆ.. ಪದೇ ಪದೇ ಹಣ ನೀಡುವಂತೆ ಒತ್ತಾಯ ಮಾಡ್ತಿದ್ಲಂತೆ ಯುವತಿ. ಆದ್ರೆ ಆಗ ಕೊಡುತ್ತೇನೆ, ಈಗ ಕೊಡುತ್ತೇನೆ ಎಂದು ಆಶೀಶ್ ಸಮಯ ಕಳೆದಿದ್ದ. ಯಾವಾಗ ಪ್ರಿಯಾಂಕ ಕಾಟ ಹೆಚ್ಚಾಯ್ತೋ, ಹತ್ಯೆಗೆ ಸ್ಕೆಚ್ ಹಾಕಿದ್ದ ಸಾಹು. ತನ್ನ ಮೆಡಿಕಲ್ ಗೆ ಕರೆಸಿ, ಪ್ರಿಯಾಂಕಳ ಕತ್ತು ಹಿಸುಕಿ ಕೊಲೆ ಮಾಡಿದ್ದ, ಅತ್ತ ಮಗಳು ನಾಪತ್ತೆಯಾಗಿದ್ದಾಳೆ ಅಂತ ಪೋಷಕರು ದೂರು ನೀಡಿದ್ರು. ಇದನ್ನ ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ತನಿಖೆ ತೀವ್ರಗೊಳಿಸಿದ್ರು. ಆಗ ಫೋನ್ ಲಾಸ್ಟ್ ಲೋಕೇಷನ್ ಆಶೀಶ್ ಮೆಡಿಕಲ್ ಅಂತ ತೋರಿಸಿತ್ತು. ವಿಚಾರಣೆ ಮಾಡಿದಾಗ ಪ್ರಿಯಾಂಕ ಹತ್ಯೆ ಬಗ್ಗೆ ಆಶೀಶ್ ಬಾಯ್ಬಿಟ್ಟಿದ್ದಾನೆ.

ಇನ್ನೇನು ಪ್ರಿಯಾಂಕ ಮೃತದೇಹವನ್ನ ಡಿಸ್ಪೋಸ್ ಮಾಡಬೇಕು ಅನ್ನುವಷ್ಟರಲ್ಲೇ ರಕ್ತ ಪಿಪಾಸು ಪೊಲೀಸರ ಬಲೆಗೆ ಬಿದ್ದ. ಏನಾದರೂ ಸ್ವಲ್ಪ ತಡವಾಗಿದ್ರೂ ಮೃತದೇಹ ಕೂಡ ಸಿಗದಂತೆ ಮಾಡ್ತಿದ್ದ ಆಶೀಶ್ ಸಾಹು.
ಸದ್ಯ ಪ್ರಾಥಮಿಕ ತನಿಖೆ ವೇಳೆ ಹಣಕ್ಕಾಗಿ ಕೊಲೆ ಮಾಡಲಾಗಿದೆ ಅಂತ ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಪಿಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗಿದೆ.. ಒಟ್ಟಾರೆ, ಶ್ರದ್ಧಾಳ ಕಗ್ಗೋಲೆ ಬೆನ್ನಲ್ಲೇ ಪ್ರಿಯಾಂಕ ಸಿಂಗ್ ಹತ್ಯೆ ಬೆಳಕಿಗೆ ಬಂದಿದ್ದು, ಜನರನ್ನ ದಂಗು ಬಡಿಸಿದೆ.


























