ಪುತ್ತೂರು: ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ರಬ್ಬರ್ ಶೀಟ್ ದಾಸ್ತಾನು ಇಟ್ಟಿದ್ದ ಕೊಟ್ಟಿಗೆ ಬೆಂಕಿಗಾಹುತಿಯಾದ ಘಟನೆ ಮುಂಡೂರು ಗ್ರಾಮದ ಕಡ್ಯ ಎಂಬಲ್ಲಿ ನಡೆದಿದೆ.

ಮುಂಡೂರು ಗ್ರಾಮದ ಕಡ್ಯ ಶಿವರಾಮ ಕಲ್ಲೂರಾಯ ಎಂಬವರ ರಬ್ಬರ್ ಶೀಟ್ ದಾಸ್ತಾನು ಇಟ್ಟಿದ್ದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಘಟನೆಯಲ್ಲಿ ರಬ್ಬರ್ ಶೀಟ್ ಮತ್ತು 2000 ತೆಂಗಿನಕಾಯಿ, ರಸ ಗೊಬ್ಬರ ಬೆಂಕಿಗಾಹುತಿಯಾಗಿದ್ದು, ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ..

