‘ಕಾಂತಾರ’ ಸಿನಿಮಾ ಬಿಡುಗಡೆಗೊಂಡು ಕೆಲ ದಿನಗಳೆ ಕಳೆದರೂ ಈಗಲೂ ಸಿನಿಮಾದ ಬಗ್ಗೆ ಎಲ್ಲೆಡೆ ಜನ ಮಾತನಾಡುತ್ತಿದ್ದಾರೆ. ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಆದರೇ ಸಿನಿಮಾದ ನಂತರ ನಡೆಯುತ್ತಿರುವ ಕೆಲ ವಿಚಾರಗಳು ತುಳುನಾಡಿನ ಸಂಸ್ಕೃತಿಯನ್ನು ಅವಮಾನಿಸುವಂತಿದೆ. ಈ ಬಗ್ಗೆ ದೈವರಾಧಕರಾದ ದಯಾನಂದ್ ಜಿ ಕತ್ತಲ್ ಸಾರ್ ರವರು ಪ್ರತಿಕ್ರಿಯಿಸಿದ್ದು, ‘ಕಾಂತಾರ’ ಸಿನಿಮಾ ತಂಡ ಈ ಬಗ್ಗೆ ಜನರಲ್ಲಿ ತಿಳಿ ಹೇಳುವಂತೆ ಅವರು ತಿಳಿಸಿದ್ದಾರೆ.
‘ಯಾವುದು ನಾವು ಒಳ್ಳೆಯದು ಎಂದು ಗ್ರಹಿಸಿದ್ದೇವೆಯೊ, ಯಾವುದು ದೈವರಾಧನೆ ಬಗ್ಗೆ ಜಗತ್ತನ್ನ ಜಾಗೃತಗೊಳಿಸಿದೆಯೊ ಅದರ ಬಗ್ಗೆ ನಾವೆಲ್ಲರೂ, ಹೆಮ್ಮೆ ಪಟ್ಟಿದ್ದೇವೆಯೊ, ಆದ್ರೇ ಅದರಲ್ಲಿ ಚಿಕ್ಕ-ಚಿಕ್ಕ ತೊಡಕುಗಳನ್ನು ಕಾಣುವಾಗ ನೋವಾಗುತ್ತದೆ., ‘ಕಾಂತಾರ’ ಚಲನಚಿತ್ರದ ಬಗ್ಗೆ ವಿಶ್ವದಾದ್ಯಂತ ತುಳುನಾಡಿನ ದೈವರಾಧನೆ ಪರಿಚಯ ಆಯ್ತು ಅನ್ನುವುದು ಸತ್ಯ., ಸಿನಿಮಾವನ್ನು ಒಳ್ಳೆ ಉದ್ದೇಶದಿಂದ ಮಾಡಲಾಗಿದೆ. ಆದ್ರೇ ಕೆಲ ವಿಕೃತ ಮನಸ್ಸುಗಳು ತಮ್ಮ ಚೇಷ್ಟೆಯನ್ನು ಮಾಡುವುದಕ್ಕಾಗಿ ದೈವರಾಧನೆಯ ಮುಖವರ್ಣಿಕೆಯ ಮೌಲ್ಯದ ಬಗ್ಗೆ ಅರಿವು ಇಲ್ಲದೆ, ಅದನ್ನು ದುರುಪಯೋಗ ಪಡಿಸಿಕೊಳ್ಳುವಂತಹ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ’.

ಸಾಮಾಜಿಕ ಜಾಲತಾಣಗಳಲ್ಲಿ ಪಂಜುರ್ಲಿ ದೈವದ ಸಂಪ್ರದಾಯಕ ಮುಖವರ್ಣಿಕೆಯನ್ನು ಆ್ಯಪ್ ಮೂಲಕ ತೋರಿಸಲಾಗುತ್ತಿದ್ದು, ಯಾರ ಮುಖಕ್ಕೆ ಆ್ಯಪ್ ಅನ್ನು ಹಿಡಿದರು ಅವರ ಮುಖ ಪಂಜುರ್ಲಿ ದೈವ ಮುಖವರ್ಣಿಕೆಯಂತೆ ಕಾಣುತ್ತದೆ. ಈ ಆ್ಯಪ್ ಅನ್ನು ಡಿಲೀಟ್ ಮಾಡಬೇಕು., ಶಾಶ್ವತವಾಗಿ ಅದನ್ನು ನಿಷೇಧಿಸಬೇಕು. ಈ ರೀತಿ ಕೆಟ್ಟದ್ದಾಗಿ ಹೆಜ್ಜೆ ಇಡುತ್ತಿರುವವರಿಗೆ ‘ಕಾಂತಾರ’ ಚಿತ್ರತಂಡ ಉತ್ತರ ನೀಡಬೇಕು. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮಕೈಗೊಳ್ಳಬೇಕು. ಇಲ್ಲವಾದ್ರೆ ದೈವದ ಮುಖವರ್ಣಿಕೆಯನ್ನು ಸಿಕ್ಕ-ಸಿಕ್ಕವರು ಮಾಡಿ ನಿಂದನಾ ರೀತಿಯಲ್ಲಿ ಮುಂದುವರಿಯುವುದು ಎಷ್ಟು ಸರಿ..!!?, ಇದರ ಬಗ್ಗೆ ಜಾಗೃತಿ ವಹಿಸಿ ಇದನ್ನು ನಿಷೇಧಿಸಬೇಕು. ಈ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕು. ಕಾನೂನು ರೀತಿಯಲ್ಲಿ ಇದನ್ನು ಹೇಗೆ ತಡೆಗಟ್ಟ ಬಹುದು ಎಂಬುದರ ಬಗ್ಗೆ ನೀವು ಚಿಂತನೆ ನಡೆಸಬೇಕು. ನಾವು ನಿಮ್ಮೊಂದಿಗೆ ಬರುತ್ತೇವೆ. ಇದರ ಜವಾಬ್ದಾರಿ ‘ಕಾಂತಾರ’ ಚಿತ್ರ ತಂಡದವರದ್ದು, ದಯವಿಟ್ಟು ಇದನ್ನು ನಿಲ್ಲಿಸುವಂತಹ ಕಾರ್ಯವನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ.
ದೈವರಾಧನೆಯ ಮುಖವರ್ಣಿಕೆ ಎನ್ನುವಂತದ್ದು, ಸಾಮಾನ್ಯ ಅಲ್ಲ, ಅದನ್ನು ಸಂಪ್ರದಾಯ ಬದ್ದವಾಗಿ ಮಾಡಲಾಗಿರುತ್ತದೆ. ಆ ಬಣ್ಣವನ್ನ ಪೂಜಿಸಿ ಹಾಕುವುದು ನಮ್ಮ ಕ್ರಮವಾಗಿದೆ. ರಾತ್ರಿಯಿಂದ ಬೆಳಗಿನ ವರೆಗೆ ನಾವು ಕಟ್ಟಿದ ನೇಮದ ಅರ್ದಾಲವನ್ನು ತೆಗೆದು ಮರು ದಿವಸ ಇನ್ನೊಬ್ಬರಿಗೆ ಕೊಟ್ಟರೆ ಅದು ಔಷಧವಾಗಿ ಪರಿಣಮಿತವಾಗುತ್ತದೆ. ಇಂತಹ ವಿಶೇಷವಿರುವ ಮುಖವರ್ಣಿಕೆಯನ್ನು ಸಿಕ್ಕ-ಸಿಕ್ಕವರು ಬಳಸುವುದು ತಪ್ಪು, ದಯವಿಟ್ಟು ಇದನ್ನು ನಿಲ್ಲಿಸುವಂತಹ ಪ್ರಯತ್ನ ರಿಷಬ್ ಶೆಟ್ಟಿ ಹಾಗೂ ಕಾಂತಾರ ಚಿತ್ರ ತಂಡದಿಂದ ಆಗಬೇಕು ಎಂದು ಸಮಸ್ತ ದೈವಾರಾಧಕರ ಪರವಾಗಿ ದಯಾನಂದ್ ಕತ್ತಲ್ ಸಾರ್ ರವರು ಮನವಿ ಮಾಡಿದ್ದಾರೆ..