ಪುತ್ತೂರು: ಪಾಲ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.24 ರಂದು ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಎಲ್ಯಡ್ಕ ಗ್ರಾಮ ಪಂಚಾಯತ್ ಸದಸ್ಯ ತಾರಾನಾಥ ಗುಳಿಯಾಲ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು, ಉಪಾಧ್ಯಕ್ಷ ಶಶಿಧರ ನಾಯ್ಕ, ಕಾರ್ಯದರ್ಶಿ ಪುಷ್ಪಾವತಿ ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ ಗೌಡ ದೊಡ್ಡಮನೆ, ಮಾರ್ಗದರ್ಶಿ ಶಿಕ್ಷಕಿ ಸುಗುಣ, ಗ್ರಾ.ಪಂ ಮಾಜಿ ಸದಸ್ಯ ದಿವಾಕರ ಬಂಗೇರ, ಮುಖ್ಯ ಶಿಕ್ಷಕಿ ಸುಜಾತ, ಮಾಜಿ ಯೋಧ ಕರುಣಾಕರ ಪೆಲತ್ತಡ್ಕ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ವಾರ್ಷಿಕೋತ್ಸವ ಸಮಿತಿ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.




























