ಪುತ್ತೂರು: ಝೀ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ‘ಸರಿಗಮಪ”ದಲ್ಲಿ ಮೂರುವರೆ ವರ್ಷದ ಚಿನಕುರಲಿ ಜ್ಞಾನ ಗುರುರಾಜ್ ಈಗ ಕನ್ನಡಿಗರ ಮನೆಮಗಳು. ಇದೀಗ ಈ ಗಾನಕೋಗಿಲೆ ಪುತ್ತೂರಿನ ಮಹಾಲಿಂಗೇಶ್ವರ ದೇವರ ಗುಣಗಾನ ಮಾಡುವ ಮೂಲಕ ಮತ್ತೊಮ್ಮೆ ಮನೆಮಾತಾಗಳಿದ್ದಾಳೆ.
ಪುತ್ತೂರಿನ ಮಹಾಲಿಂಗೇಶ್ವರ ದೇವರ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ಇದರ ಪ್ರಯುಕ್ತ ಮಲೆನಾಡಿನ ಹೆಣ್ಣು ಖ್ಯಾತಿಯ ಚರಣ್ ಉಪ್ಪಳಿಗೆ ರವರ ಸಾರಥ್ಯದಲ್ಲಿ, ಶುಭ್ರ ಪುತ್ರಕಳ ಇವರ ಸಾಹಿತ್ಯದಲ್ಲಿ, ಜ್ಞಾನ ಗುರುರಾಜ್ ರವರ ಕಂಠದಲ್ಲಿ ‘ಈಶ ಮಹಾಲಿಂಗೇಶ ‘ಎಂಬ ಭಕ್ತಿ ಪ್ರಧಾನ ಆಲ್ಬಮ್ ಸಾಂಗ್ ಮೂಡಿ ಬರಲಿದೆ.