ಮಂಗಳೂರು: ಎರಡು ವರ್ಷ ಕೊರೊನಾ ಹೊಡೆತದಿಂದ ನಲುಗಿದ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಗರಿಗೆದರುವ ಲಕ್ಷಣ ಕಂಡು ಬಂದಿದೆ. ನವಮಂಗಳೂರು ಬಂದರಿಗೆ 271 ಪ್ರವಾಸಿಗರು ಮತ್ತು 373 ಮಂದಿ ಸಿಬ್ಬಂದಿಯನ್ನು ಹೊತ್ತ ಎಂಎಸ್ ಯುರೋಪಾ 2 ಆಗಮಿಸಿತು.

ಯಕ್ಷಗಾನ, ಚೆಂಡೆ ವಾದನಗಳೊಂದಿಗೆ ಪ್ರವಾಸಿಗರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ಬಸ್ ಹಾಗೂ ಖಾಸಗಿ ಪ್ರವಾಸಿ ಕಾರುಗಳಲ್ಲಿ ಪ್ರವಾಸಿಗರನ್ನು ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಮಂಗಳೂರಿನ ಸೈಂಟ್ ಅಲೋಶಿಯಸ್ ಚಾಪೆಲ್, ಕದ್ರಿ ದೇವಸ್ಥಾನ, ಮಂಗಳೂರು ಮಾರ್ಕೆಟ್, ಕುದ್ರೋಳಿ ದೇವಸ್ಥಾನ ಸಹಿತ ಆಕರ್ಷಕ ಪ್ರವಾಸಿ ಸ್ಥಳಗಳಿಗೆ ಕರೆದೊಯ್ಯಲಾಯಿತು. ಬಳಿಕ ಪ್ರವಾಸಿ ಹಡಗು ಕೊಚ್ಚಿಗೆ ತೆರಳಿತು.