ವಿಟ್ಲ: ಠಾಣಾ ವ್ಯಾಪ್ತಿಯಲ್ಲಿ ವಾರಂಟ್ ಜಾರಿಯಾದ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.
ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರ ಮಾರ್ಗದರ್ಶನದಲ್ಲಿ ಬಂಟ್ವಾಳ ನ್ಯಾಯಾಲಯದ Cr.Miss case No 97/2019 ಕಲಂ:Maintenance case ನಲ್ಲಿ ಆರೋಪಿಯಾಗಿರುವ ವೀರಕಂಬದ ಯಾಧವ (39) ಎಂಬಾತನಿಗೆ ನ್ಯಾಯಾಲಯದಿಂದ ವಾರೆಂಟ್ ಮತ್ತು FLW ಜ್ಯಾರಿಯಾಗಿದ್ದು, ಡಿ.1 ರಂದು ವಿಟ್ಲ ಠಾಣಾ ಎಎಸ್ಐ ತಿಮ್ಮಯ್ಯ ಗೌಡ, ಎಎಸ್ಐ ಜಯರಾಮ ಮತ್ತು ಮನೋಜ್ ಕುಮಾರ್ ರವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರ ಮಾರ್ಗದರ್ಶನದಲ್ಲಿ ಬಂಟ್ವಾಳ ನ್ಯಾಯಾಲಯದ AP ನಂ: 28/2018 ಕಲಂ: 27 of the consumer Protection act 1986 ರಲ್ಲಿ ಆರೋಪಿಯಾಗಿರುವ ಬೊಳಂತೂರು ನಿವಾಸಿ ದಿನೇಶ್ ಎಂಬಾತನಿಗೆ ನ್ಯಾಯಾಲಯದಿಂದ ವಾರೆಂಟ್ ಜ್ಯಾರಿಯಾಗಿದ್ದು, ನ.30 ವಿಟ್ಲ ಠಾಣಾ ಎಎಸ್ಐ ಜಯರಾಮ ಮತ್ತು ಮನೋಜ್ ಕುಮಾರ್ ಮತ್ತು ವಿಠಲ ರವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
