ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವದ ಅಂಗವಾಗಿ ಸಾಮೂಹಿಕ ‘ಶ್ರೀ ಸತ್ಯ ನಾರಾಯಣ ಪೂಜೆ’ ಡಿ.6 ರಂದು ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ.
ಸಭಾಕಾರ್ಯಕ್ರಮವು ಮಧ್ಯಾಹ್ನ 11 ಗಂಟೆಯಿಂದ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಜ್ಯೋತಿಷ್ಯರಾದ ವೆಂಕಟ್ರಮಣ ಮುಚ್ಚಿನ್ನಾಯ ಕಾರಿಂಜ ರವರು ವಹಿಸಲಿದ್ದಾರೆ.
ಆಶೀರ್ವಚನವನ್ನು ಹಿಂದೂ ಜಾಗರಣ ವೇದಿಕೆ ಕರ್ನಾಟಕ ರಾಜ್ಯ ಗೌರವಾಧ್ಯಕ್ಷರು, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ರವರು ನೀಡಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಪ್ರಾಂತ ಸಂಚಾಲಕರಾದ ದೋ ಕೇಶವ ಮೂರ್ತಿ ರವರು ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























